alex Certify ಹೆಸರಿಗೆ ಇಂಟೀರಿಯರ್ ಡಿಸೈನಿಂಗ್ ಕೋರ್ಸ್ ಆದರೆ ಒಳಗಡೆ ನಡೆಸುತ್ತಿದ್ದದ್ದು ಮಾತ್ರ ಸೆಕ್ಸ್ ದಂಧೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಸರಿಗೆ ಇಂಟೀರಿಯರ್ ಡಿಸೈನಿಂಗ್ ಕೋರ್ಸ್ ಆದರೆ ಒಳಗಡೆ ನಡೆಸುತ್ತಿದ್ದದ್ದು ಮಾತ್ರ ಸೆಕ್ಸ್ ದಂಧೆ..!

Vadodara 2 held for running sex racket, 2 women rescued, say police - NewsRediffಅವರೆಲ್ಲಾ ಇಂಟೀರಿಯರ್ ಡಿಸೈನಿಂಗ್ ಅಂಡ್ ಆರ್ಕಿಟೆಕ್ಟ್ ತರಬೇತಿ ಪಡೆಯಲು ಇಲ್ಲಿಗೆ ಬರುತ್ತಿದ್ದಾರೆ ಅಂದುಕೊಂಡ ಸ್ಥಳೀಯರಿಗೆ ಶಾಕ್ ಆಗಿದೆ. ಯಾಕಂದ್ರೆ ಅಲ್ಲಿ ನಡೆಯುತ್ತಿದ್ದದ್ದು ಆನ್‌ಲೈನ್‌ನಲ್ಲಿ ಅಂಗಾಂಗ ಪ್ರದರ್ಶನದ ತರಬೇತಿ.

ಹೌದು, ಈ ಘಟನೆ ನಡೆದಿರೋದು ಗುಜರಾತ್‌ನ ವಡೋದರ ನಗರದಲ್ಲಿ. ಈ ಕಟ್ಟಡದ ಹೊರಗೆ ಡಿಸೈನಿಂಗ್ ಅಂಡ್ ಆರ್ಕಿಟೆಕ್ಟ್ ತರಬೇತಿ ಅಂತಾ ಬೋರ್ಡ್ ಹಾಕಲಾಗಿತ್ತು. ಆದರೆ ಈ ಕಟ್ಟಡದ ಒಳಗೆ ವರ್ಚುವಲ್ ಸೆಕ್ಸ್ ದಂಧೆ ನಡೆಯುತ್ತಿತ್ತಂತೆ. ಈ ಖಚಿತ ಮಾಹಿತಿ ಪಡೆದ ಪೊಲೀಸರು ಅಡ್ಡೆ ಮೇಲೆ ದಾಳಿ ಮಾಡಿದ್ದಾರೆ. ಈ ದಂಧೆಯ ರೂವಾರಿ ನೀಲೇಶ್ ಗುಪ್ತ ಸೇರಿದಂತೆ ಹಲವರನ್ನು ಬಂಧಿಸಿದ್ದಾರೆ.

ಇನ್ನು ಈ ಜಾಲ ಪತ್ತೆಯಾಗಿದ್ದೆ ಒಂದು ರೋಚಕ. ಸದ್ಯ ಕೊರೊನಾದಿಂದಾಗಿ ಆನ್‌ಲೈನ್ ಕ್ಲಾಸ್‌ಗಳು ನಡೆಯುತ್ತಿವೆ. ಆದರೆ ಬೇರೆ ಬೇರೆ ರಾಜ್ಯಗಳಿಂದ ತರಗತಿಗಳಿಗೆ ಅಂತ ಯುವತಿಯರು ಇಲ್ಲಿಗೆ ಬರುತ್ತಿದ್ದರಂತೆ. ಎಲ್ಲಾ ಕಡೆ ಆನ್‌ಲೈನ್ ಕ್ಲಾಸ್ ನಡೆಯುತ್ತಿರುವಾಗ ಈ ಯುವತಿಯರು ಹೀಗೆ ಯಾಕೆ ತರಗತಿಗಳಿಗೆ ಬರುತ್ತಾರೆಂಬ ಅನುಮಾನ ಹಲವರಲ್ಲಿ ಮೂಡಿದೆ.

ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಅಲ್ಲಿನ ಸ್ಥಳೀಯರು. ಕಾರ್ಯಪ್ರವೃತ್ತರಾದ ಪೊಲೀಸರು ಸಮಯ ನೋಡಿಕೊಂಡು ದಾಳಿ ನಡೆಸಿದಾಗ ಸತ್ಯಾಂಶ ತಿಳಿದಿದೆ. ಈ ಪ್ರಕರಣ ಕುರಿತು ತನಿಖೆ ಆರಂಭವಾಗಿದ್ದು, ಇದರ ಹಿಂದೆ ದೊಡ್ಡ ಜಾಲವೇ ಇದೆ ಎಂಬ ಅನುಮಾನ ಪೊಲೀಸರಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...