alex Certify ಹೊಗೆ ಉಗುಳುತ್ತಾ ವಾಹನದಿಂದ ಇಳಿದ ಹುಲಿ…! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಗೆ ಉಗುಳುತ್ತಾ ವಾಹನದಿಂದ ಇಳಿದ ಹುಲಿ…! ವಿಡಿಯೋ ವೈರಲ್

ಹುಲಿಯೊಂದು ಸಿಗರೇಟು ಸೇದಿದಂತೆ ತನ್ನ ಬಾಯಿಂದ ಹೊಗೆ ಉಗುಳುತ್ತ ವಾಹನದಿಂದ ಹೊರ ಬೀಳುವ ವಿಡಿಯೋವೊಂದು ಜಾಲತಾಣದದಲ್ಲಿ ಓಡಾಡಿದ್ದು, ಅಚ್ಚರಿಗೆ ಕಾರಣವಾಗಿದೆ.

ಐಎಫ್ಎಸ್ ಅಧಿಕಾರಿ‌ ಪ್ರವೀಣ ಕಾಸ್ವಾನ್ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. “ಹುಲಿ ಸ್ಮೋಕ್‌ ಮಾಡಿತಾ‌..?” ಎಂದು ಕ್ಯಾಪ್ಶನ್ ನೀಡಿ‌ದ್ದಾರೆ. ವಿಡಿಯೋ 29 ಕೆ ವ್ಯೂಸ್ ಪಡೆದಿದ್ದು, 1.2 ಕೆ ಲೈಕ್ಸ್ ಪಡೆದಿದೆ.

ವಿಡಿಯೋದಲ್ಲಿ ಹುಲಿ ಸಾಗಣೆ ವಾಹನದಿಂದ ಹುಲಿ ಅತ್ತಿತ್ತ ನೋಡುತ್ತ ಬಾಯಲ್ಲಿ ಹೊಗೆ ಬಿಡುತ್ತ ಇಳಿದು ಹೋಗುತ್ತದೆ. ಇದು ಮಧ್ಯ ಪ್ರದೇಶದ ಬಂಧವಾಘರ್ ಹುಲಿ ಸಂರಕ್ಷಿತ ಅಭಯಾರಣ್ಯದ ವಿಡಿಯೋ ಎನ್ನಲಾಗಿದೆ. “ಅರಣ್ಯ ಅಧಿಕಾರಿಗಳಿಂದ ಬುದ್ಧಿವಂತಿಕೆಯ ಕಾರ್ಯ, ವಾಹನದ ಟಾಪ್ ಮೇಲೆ ಕೆಲವು ಅರಣ್ಯ ಸಿಬ್ಬಂದಿ ಕುಳಿತಿದ್ದಾರೆ ನೋಡಿ” ಎಂದೂ ಪ್ರವೀಣ್ ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...