ಕಳೆದ ಕೆಲ ದಿನಗಳಿಂದ ಪಶ್ಚಿಮ ಘಟ್ಟಗಳಲ್ಲಿ ಕಾಣಸಿಗುತ್ತಿರುವ ಪ್ರಾಣಿಗಳ ಅಪರೂಪದ ಚಿತ್ರ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಇವುಗಳ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿರುವ ಪೋಸ್ಟ್ ಒಂದರಲ್ಲಿ, ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಧಾ ರಾಮೆನ್, ನಮ್ಮಲ್ಲಿ ಹೆಚ್ಚಿನ ಮಂದಿ ಕೇಳಿರದ ಪ್ರಾಣಿಯೊಂದರ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.
“ನಿಮ್ಮನ್ನು ಪುಳಕಿತಗೊಳಿಸಬಲ್ಲ ಇದು ಕರಿ ಚಿರತೆಯಲ್ಲ. ಇದು ಪಶ್ಚಿಮ ಘಟ್ಟಗಳಲ್ಲಿ ಕಾಣಸಿಗುವ ಅವನತಿಯಂಚಿನಲ್ಲಿರುವ ನೀಲಗಿರಿ ಮಾರ್ಟೆನ್. ಇದು ದಕ್ಷಿಣ ಭಾರತದಲ್ಲಿ ಲಭ್ಯವಿರುವ ಮಾರ್ಟೆನ್‌ನ ಏಕೈಕ ತಳಿಯಾಗಿದೆ” ಎಂದು ರಾಮೆನ್ ವಿವರಿಸಿದ್ದಾರೆ.