
ಸರಿ ಸುಮಾರು ಒಂದೂವರೆ ವರ್ಷದಿಂದ ಇಡೀ ವಿಶ್ವ ಕೊರೊನಾ ವೈರಸ್ ವಿರುದ್ಧ ಹೋರಾಟವನ್ನ ನಡೆಸುತ್ತಲೇ ಇದೆ. ದೇಶದಲ್ಲಿ ಕೊರೊನಾ ಎರಡನೆ ಅಲೆ ಅನೇಕ ಜೀವಗಳನ್ನ ಬಲಿ ಪಡೆದುಕೊಳ್ತಿದೆ. ಕೋವಿಡ್ 19 ವೈರಸ್ನಿಂದ ಪಾರಾಗಬೇಕು ಅಂತಾ ಭಾರತ ಸೇರಿದಂತೆ ವಿಶ್ವಾದ್ಯಂತ ಕೊರೊನಾ ಲಸಿಕೆಗಳನ್ನ ಜನರಿಗೆ ತೀವ್ರಗತಿಯಲ್ಲಿ ನೀಡಲಾಗುತ್ತಿದೆ.
ಈ ನಡುವೆ ಯುನಿಸೆಫ್ ಕೊರೊನಾ ಲಸಿಕೆ ಕುರಿತಂತೆ ಮಹತ್ವದ ವಿಚಾರವೊಂದನ್ನ ಟ್ವಿಟರ್ನಲ್ಲಿ ಶೇರ್ ಮಾಡಿದೆ. ಕೋವಿಡ್ ಲಸಿಕೆಯಿಂದ ಮಾರಣಾಂತಿಕ ಕೋವಿಡ್ ವೈರಸ್ನ್ನು ನಾಶ ಮಾಡಬಹುದಾಗಿದೆ. ಪೊಲಿಯೊ ಮುಕ್ತ ವಿಶ್ವದ ನಿರ್ಮಾಣದಂತೆಯೇ ವಿಶ್ವವು ಕೊರೊನಾ ಲಸಿಕೆಯ ಸಹಾಯದಿಂದ ಡೆಡ್ಲಿ ವೈರಸ್ನಿಂದಲೂ ಮುಕ್ತವಾಗಲಿದೆ ಎಂದು ಯುನಿಸೆಫ್ ಭರವಸೆ ವ್ಯಕ್ತಪಡಿಸಿದೆ.