alex Certify ಮೈ ಜುಮ್ಮೆನಿಸುತ್ತೆ ಬಂಡೆಯಂಚಲ್ಲಿ ಮಾಡಿರುವ ʼಬ್ಯಾಕ್ ಫ್ಲಿಪ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈ ಜುಮ್ಮೆನಿಸುತ್ತೆ ಬಂಡೆಯಂಚಲ್ಲಿ ಮಾಡಿರುವ ʼಬ್ಯಾಕ್ ಫ್ಲಿಪ್ʼ

ವ್ಯಕ್ತಿಯೊಬ್ಬ ಬಂಡೆಯ ಅಂಚಿನಲ್ಲಿ ಅಪಾಯಕಾರಿಯಾಗಿ ಬ್ಯಾಕ್ ಫ್ಲಿಪ್ ಪ್ರದರ್ಶಿಸಿದ ವಿಡಿಯೋ ಅಂತರ್ಜಾಲದಲ್ಲಿ ಸೆನ್ಸೇಷನ್ ಸೃಷ್ಟಿಸಿದೆ.

ಇದು ಮೂರ್ಖತನ ಪರಮಾವಧಿ ಎಂದೆನಿಸಿದರೂ ಸಹ ಯುವಕನ ಸಾಹಸ ಅಚ್ಚರಿ ಹುಟ್ಟಿಸುತ್ತದೆ.

ವಿಡಿಯೋವನ್ನು ಉದ್ಯಮಿ ಹರ್ಷ ಗೊಯಂಕ ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿರುವಂತೆ, ಯುವಕ ಬಂಡೆಯ ಅಂಚಿನಲ್ಲಿ ನಿಂತಿರುವುದನ್ನು ನೋಡಬಹುದು, ಬಳಿಕ ಬಂಡೆಯ ತುದಿಯಲ್ಲೇ ಬ್ಯಾಕ್ ಫ್ಲಿಪ್ ಮಾಡುತ್ತಾನೆ, ನಂತರ ವಿಜಯದ ಚಿನ್ನೆ ತೋರಿಸಿ ಬೀಗುತ್ತಾನೆ.

ಯುವಕನ ಈ ಕೃತ್ಯವನ್ನು ಮೆಚ್ಚಬೇಕೋ ಅಥವಾ ಮೂರ್ಖತನವೆಂದು ಪರಿಗಣಿಸಬೇಕೋ ಎಂದು ಗೊಯಂಕ ಶೀರ್ಷಿಕೆ ನೀಡಿದ್ದಾರೆ. ಬಹುತೇಕ ನೆಟ್ಟಿಗರು ಇದನ್ನು ಮೂರ್ಖತನದ ಪರಮಾವಧಿ ಎಂದು ಟೀಕಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...