5 ವರ್ಷದ ಬಾಲಕಿಯನ್ನ ಅತ್ಯಾಚಾರಗೈದು ಕೊಲೆ ಮಾಡಿದ ಆರೋಪದ ಅಡಿಯಲ್ಲಿ ಉತ್ತರಾಖಂಡ್ನ ಪೋಸ್ಕೋ ಕೋರ್ಟ್ ಪೋಕ್ಸೋ ಕಾಯ್ದೆ ಅಡಿಯಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಮಾತ್ರವಲ್ಲದೇ ಆತನ ಪೋಷಕರಿಗೂ ಜೈಲು ಶಿಕ್ಷೆ ವಿಧಿಸಲಾಗಿದೆ. ‘
5 ವರ್ಷದ ಬಾಲಕಿಿ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಫೆಬ್ರವರಿ 2019ರಲ್ಲಿ ಈ ಅಪರಾಧ ನಡೆದಿತ್ತು ಎಂದು ಜಿಲ್ಲಾ ನ್ಯಾಯಾಯಲಯದ ವಿಶೇಷ ಸಹಾಯಕ ಅಧಿಕಾರಿ ವಿಕಾಸ್ ಗುಪ್ತಾ ಮಾಹಿತಿ ನೀಡಿದ್ರು.
ಯುಎಸ್ ನಗರದ ರುದ್ರಪುರ ಟ್ರಾನ್ಸಿಟ್ ಕ್ಯಾಂಪ್ ಕಾಲೋನಿಯಲ್ಲಿ 2019ರ ಫೆಬ್ರವರಿ 19ರಂಧು ಮಗು ತನ್ನ ಮನೆಯ ಮೇಲ್ಛಾವಣಿಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು. ಈ ಸಂಬಂಧ ಫೆಬ್ರವರಿ 2019ರಂದು ಟ್ರಾನ್ಸಿಟ್ ಕ್ಯಾಂಪ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಧ್ಯರಾತ್ರಿ ವೇಳೆ ನೆರೆ ಮನೆಯ ಹರ್ಸ್ವರೂಪ್ ಮೇಲ್ಛಾವಣಿಯಲ್ಲಿರೋದನ್ನ ನೋಡಿದ್ದೇನೆ ಹಾಗೂ ಆತ ವಾಟರ್ ಟ್ಯಾಂಕ್ನ ಮುಚ್ಚಳವನ್ನ ತೆಗೆಯುತ್ತಿದ್ದ ಎಂದು ದೂರುದಾರ ಆರೋಪಿದ್ದರು.
ಹರ್ಸ್ವರೂಪ್ನನ್ನ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡ ಪೊಲೀಸರು ಪ್ರಕರಣ ಸಂಬಂಧ ತನಿಖೆ ನಡೆಸಿದ್ದಾರೆ. ಮಗುವಿನ ಮೃತ ದೇಹ ಈತನ ಮನೆಯಲ್ಲಿ ಬ್ಯಾಗ್ ಒಂದರಲ್ಲಿ ಲಭ್ಯವಾಗಿತ್ತು. ಮರಣೋತ್ತರ ವರದಿಯಲ್ಲಿ ಬಾಲಕಿಗೆ ದೌರ್ಜನ್ಯ ನಡೆದಿದೆ ಹಾಗೂ ಕೊಲೆಗೈಯಲಾಗಿದೆ ಎಂದು ತಿಳಿದು ಬಂದಿದೆ.
ಇದಾದ ಬಳಿಕ ಹರ್ಸ್ವರೂಪ್ ಪೋಷಕರನ್ನೂ ಜೈಲಿಗಟ್ಟಲಾಗಿತ್ತು. ಈ ಸಂಬಂಧ ತೀರ್ಪು ಪ್ರಕಟಿಸಿದ ವಿಶೇಷ ನ್ಯಾಯಾಧೀಶೆ ವಿಜಯಲಕ್ಷ್ಮೀ ವಿಹಾನ್, ಅಪರಾಧಿಗೆ ಗಲ್ಲು ಶಿಕ್ಷೆ, ಆತನ ತಂದೆ ಪಾಪೂಗೆ 4 ವರ್ಷ ಜೈಲು ಹಾಗೂ ತಾಯಿ ರೂಪಾವತಿಗೆ 3 ವರ್ಷ ಜೈಲು ಶಿಕ್ಷೆಯನ್ನ ಪ್ರಕಟಿಸಿದ್ದಾರೆ.
ಅತ್ಯಾಚಾರಿಯ ಪೋಷಕರಿಗೂ ಜೈಲು ಶಿಕ್ಷೆ ವಿಧಿಸಿದೆ ಈ ನ್ಯಾಯಾಲಯ..!
08-03-2021 3:22PM IST / No Comments / Posted In: Latest News, India