ಉತ್ತರಾಖಂಡ್ನ ಚಮೋಲಿ ಜಿಲ್ಲೆಯ ನಂದಾದೇವಿ ಹಿಮಸ್ಫೋಟದಲ್ಲಿ ಕಣ್ಮರೆಯಾಗಿರುವ 136 ಮಂದಿಯನ್ನ ದುರಂತದಲ್ಲಿ ಸಾವಿಗೀಡಾದವರ ಸಾಲಿಗೆ ಸೇರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಿಮಸ್ಪೋಟದಿಂದಾಗಿ ಹಲವಾರು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದ್ದು ಈವರೆಗೆ ಸುರಂಗದಿಂದ 60 ಕ್ಕೂ ಹೆಚ್ಚು ಶವಗಳನ್ನ ಹೊರತೆಗೆಯಲಾಗಿತ್ತು.
ಫೆಬ್ರುವರಿ 7 ರ ಭಾನುವಾರದಂದು ಉತ್ತರಾಖಂಡದ ಚಮೋಲಿ ಜಿಲ್ಲೆಯ ತಪೋವನ-ರೈನಿ ಪ್ರದೇಶದಲ್ಲಿ ನೀರ್ಗಲ್ಲು ಕುಸಿತದ ಪರಿಣಾಮ ಧೌಲಿಗಂಗಾ ಹಾಗೂ ಅಲಂಕಾನಂದ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿತ್ತು. ಪ್ರವಾಹದ ತೀವ್ರತೆಗೆ ರಿಷಿಗಂಗಾ ವಿದ್ಯುತ್ ಯೋಜನೆ ಹಾನಿಗೊಳಗಾಗಿತ್ತು.