ಪಿಪಿಇ ಕಿಟ್ ಧರಿಸಿ ಮದುವೆ ದಿಬ್ಬಣದ ಎದುರು ಕುಣಿದು ಕುಪ್ಪಳಿಸಿದ ಆಂಬುಲೆನ್ಸ್ ಚಾಲಕ..! 28-04-2021 1:17PM IST / No Comments / Posted In: Latest News, India ದೇಶದಲ್ಲಿ ಕಳೆದ ವರ್ಷದಿಂದ ಕೊರೊನಾ ವೈರಸ್ ಜನರ ನಿದ್ದೆಗೆಡಿಸಿದ್ದು ಜನರ ಜೀವವನ್ನ ಕಾಪಾಡಲು ಆರೋಗ್ಯ ಸಿಬ್ಬಂದಿ ಇನ್ನಿಲ್ಲದ ಶ್ರಮ ಪಡ್ತಿದ್ದಾರೆ. ಆರೋಗ್ಯ ಸಿಬ್ಬಂದಿಯೂ ಸಹ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಿ ಹೋಗಿದ್ದಾರೆ. ಉತ್ತರಾಖಂಡ್ನಲ್ಲೂ ನಿರಂತರ ಕೆಲಸದಿಂದ ಕುಗ್ಗಿ ಹೋಗಿದ್ದ ಆಂಬುಲೆನ್ಸ್ ಚಾಲಕನೊಬ್ಬ ಪಿಪಿಇ ಕಿಟ್ ಧರಿಸಿ ಮದುವೆ ದಿಬ್ಬಣದ ಎದುರು ಕುಣಿಯುವ ಮೂಲಕ ತಮ್ಮ ಒತ್ತಡದಿಂದ ನಿರಾಳರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವ ಈ ವಿಡಿಯೋದಲ್ಲಿ ಮಹೇಶ್ ಎಂಬ ಆಂಬುಲೆನ್ಸ್ ಚಾಲಕ ಪಿಪಿಇ ಕಿಟ್ ಧರಿಸಿಕೊಂಡೇ ಮದುವೆ ದಿಬ್ಬಣದ ಎದುರು ಕುಣಿದಿದ್ದಾರೆ. ಮದುವೆಗೆ ಆಗಮಿಸಿದ್ದ ಇತರೆ ಅತಿಥಿಗಳು ಈ ವಿಡಿಯೋವನ್ನ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಸೋಮವಾರ ರಾತ್ರಿ ಸುಶೀಲಾ ತಿವಾರಿ ಮೆಡಿಕಲ್ ಕಾಲೇಜು ಎದುರು ಮದುವೆ ದಿಬ್ಬಣ ಹೋಗುತ್ತಿರೋದನ್ನ ಕಂಡ ಮಹೇಶ್ ಆಂಬುಲೆನ್ಸ್ನಿಂದ ಕೆಳಗೆ ಇಳಿದು ಬಂದು ಟಪ್ಪಾಂಗುಚ್ಚಿ ನೃತ್ಯ ಮಾಡಿದ್ದಾರೆ. ಮೊದಲು ಮಹೇಶ್ರನ್ನ ಆಶ್ಚರ್ಯದಿಂದ ಕಂಡ ಮದುವೆ ಮನೆಯವರು ಬಳಿಕ ಅವರೊಂದಿಗೆ ಹೆಜ್ಜೆ ಹಾಕಿದ್ದನ್ನ ಕಾಣಬಹುದಾಗಿದೆ. Some positivity from Haldwani, Uttarakhand. Ambulance driver mahesh started dancing in a baraat as it crossed Sushila Tiwari Hospital. He said he carries COVID patients all day which leaves him in lot of stress. He was trying to dance as a stress buster. #spreadsomepositivity pic.twitter.com/DTYTuMDwYL — Shivangni Sharma (@Ar_Shivangni) April 27, 2021