ಉತ್ತರಾಖಂಡ್ನ ಬಾಗೇಶ್ವರ ಜಿಲ್ಲೆಯಲ್ಲಿ 18 ಜಾನುವಾರುಗಳನ್ನ ಕಂದಕಕ್ಕೆ ತಳ್ಳಲಾಗಿದ್ದು ಏಳು ಹಸುಗಳು ಸಾವನ್ನಪ್ಪಿವೆ ಎನ್ನಲಾಗಿದೆ. ಬಾಗೇಶ್ವರ ಜಿಲ್ಲಾಡಳಿತ ಪ್ರಕರಣ ಸಂಬಂಧ ತನಿಖೆಗೆ ಸೂಚನೆ ನೀಡಿದೆ.
ಈ ವಿಚಾರವಾಗಿ ಮಾತನಾಡಿದ ಕಪ್ಕೋಟ್ನ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ರಾಕೇಶ್ ಚಂದ್ರ ತಿವಾರಿ, ಕಂದಕದಲ್ಲಿ ಬಿದ್ದಿದ್ದ 18 ಜಾನುವಾರುಗಳನ್ನ ಎನ್ಡಿಆರ್ಎಫ್ ಪಡೆ ಮಂಗಳವಾರ ರಕ್ಷಿಸಿದೆ. ಈ ಹಸುಗಳನ್ನ ಯಾರು ಕಂದಕಕ್ಕೆ ತಳ್ಳಿದ್ದಾರೆ ಅನ್ನೋದ್ರ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದ್ರು.
18 ಹಸುಗಳಲ್ಲಿ 11 ಹಸುಗಳನ್ನ ಎನ್ಡಿಆರ್ಎಫ್ ಪಡೆ ರಕ್ಷಿಸಿದೆ. ರಕ್ಷಣಾ ಕಾರ್ಯಾಚರಣೆಗೂ ಮುನ್ನವೇ 7 ಜಾನುವಾರುಗಳು ಮೃತಪಟ್ಟಿವೆ ಎಂದು ರಾಕೇಶ್ ಚಂದ್ರ ಹೇಳಿದ್ದಾರೆ.
ಬಾಗೇಶ್ವರ ಜಿಲ್ಲೆಯ ಕಪ್ಕೋಟ್ನ ಕಲಾಪಣಿ ಗಧೇರಾದ ಕಂದಕದಲ್ಲಿ ಸಿಲುಕಿದ್ದ ಹಸುಗಳನ್ನ ಕೆಲವರು ಪತ್ತೆ ಹಚ್ಚಿದ್ದರು.