alex Certify ಒಂಟಿಯಾಗಿದ್ದ ಯುವತಿ ಮೇಲೆ ಪ್ರಭಾವಿ ಕುಟುಂಬದ ಯುವಕರಿಂದ ಅತ್ಯಾಚಾರ ಎಸಗಿ ಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂಟಿಯಾಗಿದ್ದ ಯುವತಿ ಮೇಲೆ ಪ್ರಭಾವಿ ಕುಟುಂಬದ ಯುವಕರಿಂದ ಅತ್ಯಾಚಾರ ಎಸಗಿ ಘೋರ ಕೃತ್ಯ

ಲಖ್ನೋ: ಉತ್ತರಪ್ರದೇಶದ ಇಟಾ ಜಿಲ್ಲೆಯಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಯುವಕರಿಬ್ಬರು ಸಾಕ್ಷಿಯಾಗಿದ್ದ ಸಂತ್ರಸ್ತೆಯ ಸಹೋದರನನ್ನು ಕೊಲೆ ಮಾಡಿದ ಘಟನೆ ನಡೆದಿದೆ.

ಇಟಾ ಜಿಲ್ಲೆಯ ಗ್ರಾಮವೊಂದರ ಪ್ರಭಾವಿ ಕುಟುಂಬದ ಯುವಕರಿಬ್ಬರು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮನೆಯಲ್ಲಿ ಯುವತಿ ಒಂಟಿಯಾಗಿದ್ದ ಸಂದರ್ಭದಲ್ಲಿ ನುಗ್ಗಿದ ಯುವಕರು ಅತ್ಯಾಚಾರ ಎಸಗಿದ್ದಾರೆ. ಇದೇ ವೇಳೆ ಮನೆಗೆ ಬಂದ ಮತ್ತು ಸಾಕ್ಷಿಯಾಗಿದ್ದ ಯುವತಿಯ ಸಹೋದರನಾಗಿರುವ ಬಾಲಕನ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಸಾಯಿಸಿದ್ದಾರೆ.

ಬಾಲಕನ ಮೃತದೇಹವನ್ನು ಹೂತು ಹಾಕುವಂತೆ ಪೋಷಕರನ್ನು ಬೆದರಿಸಿದ್ದ ಯುವಕರು ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕಿದ್ದಾರೆ. ಘಟನೆ ನಡೆದ ಮೂರು ದಿನಗಳ ಬಳಿಕ ಪೋಷಕರು ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...