alex Certify ಡಾನ್ಸ್‌ ಮಾಡಲು ನಿರಾಕರಿಸಿದ ಪತ್ನಿ; ಬೆಂಕಿ ಹಚ್ಚಿಕೊಂಡ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಾನ್ಸ್‌ ಮಾಡಲು ನಿರಾಕರಿಸಿದ ಪತ್ನಿ; ಬೆಂಕಿ ಹಚ್ಚಿಕೊಂಡ ಪತಿ

ಜೀನ್ಸ್ ಧರಿಸಲು ಹಾಗೂ ನೃತ್ಯ ಮಾಡಲು ನಿರಾಕರಿಸಿದ್ದಾಳೆ ಎಂಬ ಕ್ಷುಲ್ಲಕ ಕಾರಣಕ್ಕೆ ಉತ್ತರ ಪ್ರದೇಶದ ಮೀರತ್​ ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ವಿಚ್ಚೇದನ ನೀಡಿದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ಪತ್ನಿಗೆ ತ್ರಿವಳಿ ತಲಾಕ್​ ನೀಡಿದ ಬಳಿಕವೂ ಸುಮ್ಮನಾಗದ ಪತಿ ಮಾವನ ಮನೆಗೆ ತೆರಳಿ ಬೆಂಕಿ ಹಚ್ಚಿಕ್ಕೊಂಡಿದ್ದಾನೆ. ಆತನ ಅಳಿಯಂದಿರು ಬೆಂಕಿ ಆರಿಸಿ ವ್ಯಕ್ತಿಯನ್ನ ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ .

ನ್ಯೂ ಇಸ್ಮಾಯಿಲ್​ ನಗರದ ಲಿಸಾರಿ ಗೇಟ್​ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ನ್ಯೂ ಇಸ್ಮಾಯಿಲ್​ ನಗರ ನಿವಾಸಿಯಾದ ಅಮಿರುದ್ದೀನ್​ 8 ವರ್ಷಗಳ ಹಿಂದೆ ತಮ್ಮ ಮಗಳನ್ನ ಪಿಲಖುವಾ ನಿವಾಸಿ ಅನಸ್​ ಜೊತೆ ವಿವಾಹ ಮಾಡಿದ್ದರು. ಅನಸ್​ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ. ತನ್ನ ಪತ್ನಿ ಬಳಿ ಹಾಡು ಹೇಳು, ಡ್ಯಾನ್ಸ್ ಮಾಡು ಅಂತಾ ಈತ ಪದೇ ಪದೇ ಪೀಡಿಸುತ್ತಿದ್ದ ಎನ್ನಲಾಗಿದೆ.

ಪತಿಯ ಕಾಟದಿಂದ ಬೇಸತ್ತಿದ್ದ ಪತ್ನಿ ಸ್ಥಳೀಯ ಪಂಚಾಯತ್​​ದಲ್ಲಿ ಆರೋಪ ಮಾಡಿದ್ದಳು. ಆದರೆ ಯಾವುದೇ ಪರಿಹಾರ ದೊರೆತಿರಲಿಲ್ಲ. ಎರಡು ದಿನಗಳ ಹಿಂದೆ ಅನಸ್​ ತನ್ನ ಪತ್ನಿಗೆ ತಲಾಕ್​ ನೀಡಿದ್ದ. ಬಳಿಕ ಪತ್ನಿಯ ತಂದೆಯ ನಿವಾಸಕ್ಕೆ ಆಗಮಿಸಿದ ಅನಸ್​ ಬೆಂಕಿ ಹಚ್ಚಿಕ್ಕೊಂಡಿದ್ದಾನೆ. ಭಾರತೀಯ ಕಾನೂನಿನ ಪ್ರಕಾರ ದೇಶದಲ್ಲಿ ತ್ರಿವಳಿ ತಲಾಕ್​ ಅಮಾನ್ಯವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...