alex Certify ಕುಣಿಯುವ ಕಾರು ಮಾಲೀಕನಿಗೆ ಬಿತ್ತು ಭಾರಿ ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಣಿಯುವ ಕಾರು ಮಾಲೀಕನಿಗೆ ಬಿತ್ತು ಭಾರಿ ದಂಡ

ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ ಕುಣಿಯುವ ಕಾರೊಂದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ದೆಹಲಿ ಮೂಲದ ಕಾರು ಮಾಲೀಕ ನಾಸುಮ್ ಅಹ್ಮದ್ ಎಂಬಾತನಿಗೆ ಬರೋಬ್ಬರಿ 41,500 ರೂ. ದಂಡ ವಿಧಿಸಲಾಗಿದೆ. ಸ್ಕಾರ್ಪಿಯೋ ಕಾರನ್ನು ಡ್ಯಾನ್ಸಿಂಗ್ ಕಾರ್ ಆಗಿ ಪರಿವರ್ತಿಸಿದ್ದ ಈತ, ಬ್ರೇಕ್ ಹಾಕಿದ ಕೂಡಲೇ ಕಾರು ಕುಣಿಯುವಂತೆ ಕಾಣುತ್ತದೆ.

ದೆಹಲಿಯಿಂದ ಬಂದ ಈತ ಉತ್ತರ ಪ್ರದೇಶದ ಘಾಜಿಯಾಬಾದ್ ರಸ್ತೆಯಲ್ಲಿ ಜೋರಾಗಿ ಮ್ಯೂಸಿಕ್ ಹಾಕಿಕೊಂಡು ಕಾರು ಚಲಾಯಿಸುತ್ತಿದ್ದ. ಮಾರ್ಗಮಧ್ಯೆ ಬೇಕೆಂದೇ ಬ್ರೇಕ್ ಹಿಡಿದು ಮೋಜು – ಮಸ್ತಿ ಮಾಡುತ್ತಿದ್ದ. ಇದನ್ನು ಕಂಡ ಪೊಲೀಸರು ಕಾರು ಜಪ್ತಿ ಮಾಡಿ, ದಂಡ ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...