alex Certify ಪತ್ನಿ ಕರ್ವಾ ಚೌತ್​ ಮಾಡುವಾಗಲೇ ಆತ್ಮಹತ್ಯೆಗೆ ಶರಣಾದ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ಕರ್ವಾ ಚೌತ್​ ಮಾಡುವಾಗಲೇ ಆತ್ಮಹತ್ಯೆಗೆ ಶರಣಾದ ಪತಿ

ಪತಿಯ ದೀರ್ಘ ಆಯಸ್ಸಿಗಾಗಿ ಪ್ರಾರ್ಥಿಸಿ ಉತ್ತರ ಭಾರತದ ಮಹಿಳೆಯರು ಕರ್ವಾ ಚೌತ್​ ಎಂಬ ಆಚರಣೆಯನ್ನ ಮಾಡುತ್ತಾರೆ. ದಿನಪೂರ್ತಿ ಉಪವಾಸವಿರುವ ಪತ್ನಿಯರು ರಾತ್ರಿ ಚಂದ್ರನ ಉದಯವಾಗುತ್ತಿದ್ದಂತೆ ಪತಿಯ ಕೈಯಿಂದಲೇ ನೀರು ಕುಡಿದು ಆರ್ಶೀವಾದ ಪಡೆಯುವ ಮೂಲಕ ಪತಿಯ ಉಜ್ವಲ ಆಯುಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ.

ಆದರೆ ಉತ್ತರ ಪ್ರದೇಶದ ಮೀರತ್​​ ನಯಿ ಬಸ್ತಿ ಏರಿಯಾದಲ್ಲಿ ಮಹಿಳೆಗೆ ಕರವಾ ಚೌತ್​ ದಿನವೇ ಗಂಡನ ಸಾವಿನ ವಾರ್ತೆ ಕೇಳಿದೆ. ಪತ್ನಿ ಪತಿಯ ಆಯಸ್ಸಿಗಾಗಿ ಉಪವಾಸ ಮಾಡುತ್ತಿದ್ರೆ ಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪತಿ – ಪತ್ನಿ ಕಲಹದಿಂದ ಬೇಸತ್ತು ಪತಿ ವಿನೋದ್​ ಕುಮಾರ್​ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಮೃತ ವಿನೋದ್​ ಈ ಹಿಂದೆಯೂ ಅನೇಕ ಬಾರಿ ಆತ್ಮಹತ್ಯೆಗೆ ಯತ್ನಿಸಿದ್ರು. ಕುಮಾರ್​ ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...