ಪತಿಯ ದೀರ್ಘ ಆಯಸ್ಸಿಗಾಗಿ ಪ್ರಾರ್ಥಿಸಿ ಉತ್ತರ ಭಾರತದ ಮಹಿಳೆಯರು ಕರ್ವಾ ಚೌತ್ ಎಂಬ ಆಚರಣೆಯನ್ನ ಮಾಡುತ್ತಾರೆ. ದಿನಪೂರ್ತಿ ಉಪವಾಸವಿರುವ ಪತ್ನಿಯರು ರಾತ್ರಿ ಚಂದ್ರನ ಉದಯವಾಗುತ್ತಿದ್ದಂತೆ ಪತಿಯ ಕೈಯಿಂದಲೇ ನೀರು ಕುಡಿದು ಆರ್ಶೀವಾದ ಪಡೆಯುವ ಮೂಲಕ ಪತಿಯ ಉಜ್ವಲ ಆಯುಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ.
ಆದರೆ ಉತ್ತರ ಪ್ರದೇಶದ ಮೀರತ್ ನಯಿ ಬಸ್ತಿ ಏರಿಯಾದಲ್ಲಿ ಮಹಿಳೆಗೆ ಕರವಾ ಚೌತ್ ದಿನವೇ ಗಂಡನ ಸಾವಿನ ವಾರ್ತೆ ಕೇಳಿದೆ. ಪತ್ನಿ ಪತಿಯ ಆಯಸ್ಸಿಗಾಗಿ ಉಪವಾಸ ಮಾಡುತ್ತಿದ್ರೆ ಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪತಿ – ಪತ್ನಿ ಕಲಹದಿಂದ ಬೇಸತ್ತು ಪತಿ ವಿನೋದ್ ಕುಮಾರ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಮೃತ ವಿನೋದ್ ಈ ಹಿಂದೆಯೂ ಅನೇಕ ಬಾರಿ ಆತ್ಮಹತ್ಯೆಗೆ ಯತ್ನಿಸಿದ್ರು. ಕುಮಾರ್ ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.