
ಉತ್ತರ ಪ್ರದೇಶ ಬುಲಂದ್ ಶಹರ್ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದೆ. ಫೋನ್ ಕಸಿದುಕೊಂಡ ಕಳ್ಳ ಮಹಿಳೆಯನ್ನ ಟ್ರಕ್ ಬದಿಗೆ ತಳ್ಳಿದ್ದಾನೆ. ಆದರೆ 26 ವರ್ಷದ ಮೀನಾ ವೇಗವಾಗಿ ಚಲಿಸುತ್ತಿದ್ದ ಟ್ರಕ್ನಿಂದ ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಮಾತ್ರವಲ್ಲದೇ ಆತನನ್ನ ಬೆನ್ನಟ್ಟಿ ಆರೋಪಿಯನ್ನ ದಾರಿಹೋಕರ ಸಹಾಯದಿಂದ ಹಿಡಿದಿದ್ದಾಳೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಮೀನಾ, ನಾನು ಕಾಲೇಜಿನಲ್ಲಿ ಕೆಲಸ ಮಾಡುತ್ತೇನೆ. ನಾನು ಮನೆಗೆ ಹಿಂದಿರುತ್ತಿದ್ದ ವೇಳೆ ನನ್ನ ಹಿಂದೆ ಬಂದ ಆರೋಪಿಗಳು ನನ್ನ ಮೊಬೈಲ್ ಫೋನನ್ನ ಕಸಿದುಕೊಂಡು ನನ್ನನ್ನ ರಸ್ತೆ ಬದಿಗೆ ತಳ್ಳಿದ್ರು. ನಾನು ಟ್ರಕ್ ಮುಂದೆ ಹೋಗಿ ಬಿದ್ದೆ. ಆದರೆ ಹೇಗೋ ಮಾಡಿ ಪ್ರಾಣಾಪಾಯದಿಂದ ಬಚಾವಾದೆ. ಹಾಗೂ ದಾರಿಹೋಕರ ಸಹಾಯದಿಂದ ಆರೋಪಿಯನ್ನ ಹಿಡಿದದ್ದು ಮಾತ್ರವಲ್ಲದೇ ನನ್ನ ಮೊಬೈಲ್ನ್ನೂ ವಾಪಾಸ್ ಪಡೆದೆ ಎಂದು ಹೇಳಿದ್ದಾಳೆ.