ಠಾಕೂರ್ ಎಂದು ಬರೆಯಲಾಗಿದ್ದ ಶೂ ಮಾರಾಟ ಮಾಡಿದ ಕಾರಣಕ್ಕೆ ಚಪ್ಪಲಿ ಅಂಗಡಿ ಮಾಲೀಕನ ವಿರುದ್ಧ ಉತ್ತರ ಪ್ರದೇಶ ಬುಲಂದಶಹರದಲ್ಲಿ ಎಫ್ಐಆರ್ ದಾಖಲಾಗಿದ್ದು ಚಪ್ಪಲಿ ಅಂಗಡಿ ಮಾಲೀಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಲಪಂಥೀಯ ನಾಯಕ ವಿಶಾಲ್ ಚೌಹಾನ್ ಎಂಬುವವರು ಚಪ್ಪಲಿ ಅಂಗಡಿ ಮಾಲೀಕ ನಾಸೀರ್ ವಿರುದ್ಧ ದೂರನ್ನ ನೀಡಿದ್ದಾರೆ. ಧರ್ಮದ ಹೆಸರಲ್ಲಿ ಸಮಾಜದ ಶಾಂತಿ ಕದಡುವುದು, ಎರಡು ಸಮುದಾಯಗಳ ವಿರುದ್ಧ ಘರ್ಷಣೆ ಉಂಟುಮಾಡಲು ಯತ್ನಿಸಿದ ಆರೋಪ ಸೇರಿದಂತೆ ಸಾಕಷ್ಟು ಆರೋಪಗಳನ್ನ ಹೊರಿಸಲಾಗಿದೆ.
ನಾಸೀರ್ನ್ನ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು ಸಂಬಂಧಪಟ್ಟ ಸೆಕ್ಷನ್ನಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಬುಲಂದಶಹರ್ ಪೊಲೀಸ್ ಇಲಾಖೆ ಟ್ವೀಟ್ ಮಾಡಿದೆ.