alex Certify ಜಾಮೀನು ಪತ್ರದ ಸಣ್ಣ ದೋಷದಿಂದ ಜೈಲಿನಲ್ಲೇ ಉಳಿದ ಆರೋಪಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಮೀನು ಪತ್ರದ ಸಣ್ಣ ದೋಷದಿಂದ ಜೈಲಿನಲ್ಲೇ ಉಳಿದ ಆರೋಪಿ..!

ಹೆಸರಿನಲ್ಲಾದ ಸಣ್ಣ ಬದಲಾವಣೆಯಿಂದಾಗಿ ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಕೋರ್ಟ್​ನಿಂದ ಜಾಮೀನು ಸಿಕ್ಕ ಬಳಿಕವೂ 8 ತಿಂಗಳುಗಳ ಜೈಲಿನಲ್ಲೇ ಇರಬೇಕಾದ ಅನಿವಾರ್ಯತೆ ಬಂದೊದಗಿದೆ.

ವಿನೋದ್​ ಕುಮಾರ್​ ಬರುವಾರ್​ ಎಂಬ ಆರೋಪಿ ಕೋರ್ಟ್​ನಿಂದ ಜಾಮೀನನ್ನ ಪಡೆದಿದ್ದರು. ಆದರೆ ಜಾಮೀನು ಆದೇಶ ಪತ್ರದಲ್ಲಿ ವಿನೋದ್​ ಬರುವಾರ್ ಎಂದಷ್ಟೇ ನಮೂದಾಗಿದ್ದರಿಂದ ಈ ಸಮಸ್ಯೆ ಬಂದೊದಗಿದೆ.

ವಿನೋದ್​ ಜಾಮೀನಿಗಾಗಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಪ್ರಿಲ್​ 9ರಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲು ನಿರ್ದೇಶನ ನೀಡಿತ್ತು. ಆದರೆ ಚಾರ್ಜ್​ಶೀಟ್​ ಹಾಗೂ ಜಾಮೀನು ಪ್ರತಿಯಲ್ಲಿ ಹೆಸರು ಬದಲಾವಣೆ ಹಿನ್ನೆಲೆ ಜೈಲು ಅಧೀಕ್ಷಕರು ಬಿಡುಗಡೆ ಮಾಡಲು ಒಪ್ಪಿಗೆ ನೀಡಿಲ್ಲ.

ಈ ಬಗ್ಗೆ ಸಲ್ಲಿಕೆಯಾದ ಅರ್ಜಿ ಬಗ್ಗೆಯೂ ವಿಚಾರಣೆ ನಡೆಸಿದ ಹೈಕೋರ್ಟ್ ಹೆಸರು ತಪ್ಪಾಗಿದೆ ಎಂಬ ಕಾರಣಕ್ಕೆ ಹೈಕೋರ್ಟ್ ಆದೇಶ ಉಲ್ಲಂಘಿಸಿ ಆರೋಪಿಯನ್ನ ಜೈಲಿನಲ್ಲಿ ಇರಿಸಿಕೊಂಡ ಬಗ್ಗೆ ಸೂಕ್ತ ಕಾರಣ ನೀಡುವಂತೆ ಸೂಚಿಸಿ ಸಿದ್ಧಾರ್ಥ ನಗರ ಜಿಲ್ಲಾ ಕಾರಾಗೃಹ ಅಧೀಕ್ಷಕ ರಾಕೇಶ್​ ಸಿಂಗ್​ರನ್ನ ವಿಚಾರಣೆಗೆ ಹಾಜರುಪಡಿಸಿತ್ತು. ವಿಚಾರಣೆಗೆ ಹಾಜರಾದ ರಾಕೇಶ್​ ಸಿಂಗ್​, ಡಿಸೆಂಬರ್ 8ರಂದು ವಿನೋದ್​ರನ್ನ ಬಿಡುಗಡೆ ಮಾಡಿರುವ ಬಗ್ಗೆ ದಾಖಲೆ ಸಲ್ಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...