alex Certify ವಿವಾಹವಾದ ಕೆಲವೇ ದಿನಗಳಲ್ಲಿ ಪತ್ನಿ ಅತ್ಯಾಚಾರದ ವಿಡಿಯೋ ವೈರಲ್…! ಇದನ್ನು ನೋಡಿ ಪತ್ನಿಯನ್ನು ತ್ಯಜಿಸಿದ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾಹವಾದ ಕೆಲವೇ ದಿನಗಳಲ್ಲಿ ಪತ್ನಿ ಅತ್ಯಾಚಾರದ ವಿಡಿಯೋ ವೈರಲ್…! ಇದನ್ನು ನೋಡಿ ಪತ್ನಿಯನ್ನು ತ್ಯಜಿಸಿದ ಪತಿ

ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ್ದ ದುಷ್ಕರ್ಮಿ ಆಕೆ ವಿವಾಹವಾದ ಬಳಿಕ ಈ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಆಕೆಯ ಪತಿ ಆಕೆಯನ್ನ ತ್ಯಜಿಸಿದ್ದಾನೆ.

ಉತ್ತರ ಪ್ರದೇಶದ ರೇವ್ತಿ ಎಂಬಲ್ಲಿ ಈ ಘಟನೆ ಸಂಭವಿಸಿದೆ. ನರೇಂದ್ರ ಎಂಬಾತ 22 ವರ್ಷದ ಸಂತ್ರಸ್ತೆ ಮೇಲೆ ಕಳೆದ ವರ್ಷ ಜನವರಿಯಲ್ಲಿ ಅತ್ಯಾಚಾರವೆಸಗಿದ್ದ. ಆದರೆ ಈ ಯುವತಿ ಕಳೆದ ವರ್ಷ ಡಿಸೆಂಬರ್​​​ನಲ್ಲಿ ಬೇರೊಬ್ಬನ ಜೊತೆ ವಿವಾಹವಾಗಿದ್ದಳು. ಇದೀಗ ನವವಿವಾಹಿತೆಯ ಅತ್ಯಾಚಾರದ ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್​ ಮಾಡಲಾಗಿದೆ.

ಈ ಸಂಬಂಧ ಸಂತ್ರಸ್ತೆಯ ತಂದೆ ರೇವ್ತಿ ಠಾಣೆಯಲ್ಲಿ ದೂರನ್ನ ದಾಖಲಿಸಿದ್ದು , ಈ ದೂರನ್ನ ಆಧರಿಸಿದ ಪೊಲೀಸರು ಆರೋಪಿ ನರೇಂದ್ರನನ್ನ ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...