ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ್ದ ದುಷ್ಕರ್ಮಿ ಆಕೆ ವಿವಾಹವಾದ ಬಳಿಕ ಈ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಆಕೆಯ ಪತಿ ಆಕೆಯನ್ನ ತ್ಯಜಿಸಿದ್ದಾನೆ.
ಉತ್ತರ ಪ್ರದೇಶದ ರೇವ್ತಿ ಎಂಬಲ್ಲಿ ಈ ಘಟನೆ ಸಂಭವಿಸಿದೆ. ನರೇಂದ್ರ ಎಂಬಾತ 22 ವರ್ಷದ ಸಂತ್ರಸ್ತೆ ಮೇಲೆ ಕಳೆದ ವರ್ಷ ಜನವರಿಯಲ್ಲಿ ಅತ್ಯಾಚಾರವೆಸಗಿದ್ದ. ಆದರೆ ಈ ಯುವತಿ ಕಳೆದ ವರ್ಷ ಡಿಸೆಂಬರ್ನಲ್ಲಿ ಬೇರೊಬ್ಬನ ಜೊತೆ ವಿವಾಹವಾಗಿದ್ದಳು. ಇದೀಗ ನವವಿವಾಹಿತೆಯ ಅತ್ಯಾಚಾರದ ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ.
ಈ ಸಂಬಂಧ ಸಂತ್ರಸ್ತೆಯ ತಂದೆ ರೇವ್ತಿ ಠಾಣೆಯಲ್ಲಿ ದೂರನ್ನ ದಾಖಲಿಸಿದ್ದು , ಈ ದೂರನ್ನ ಆಧರಿಸಿದ ಪೊಲೀಸರು ಆರೋಪಿ ನರೇಂದ್ರನನ್ನ ಬಂಧಿಸಿದ್ದಾರೆ.