ಮದುವೆಯ ಸಿರಿಯಲ್ಲಿದ್ದ ಮದುಮಗನೊಬ್ಬ ಇನ್ನೇನು ಪಲ್ಲಂಗವನ್ನೇರುವ ಕೆಲವೇ ಕ್ಷಣಗಳ ಮುನ್ನ ಕೋವಿಡ್-19ಗೆ ಪಾಸಿಟಿವ್ ಇರುವ ಸುದ್ದಿ ತಿಳಿದ ಕೂಡಲೇ ಎಲ್ಲಾ ಕಾರ್ಯಕ್ರಮವೂ ರದ್ದಾದ ಘಟನೆ ಉತ್ತರ ಪ್ರದೇಶದ ಹಮೀರ್ಪುರ ಜಿಲ್ಲೆಯ ಬಕ್ಚಾ ಗ್ರಾಮದಲ್ಲಿ ಘಟಿಸಿದೆ.
ಮದುಮಗ ಧರ್ಮೇಂದ್ರ ಹಾಗೂ ಆತನ ಕುಟುಂಬ ತಮ್ಮ ಬೀಗರ ಊರು ಬಕ್ಚಾಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದರು. ಪಕ್ಕದ ಅಸ್ಗಾಹಾ ತಮೌರಾ ಗ್ರಾಮದಲ್ಲಿ ಮದುವೆ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಮದುವೆ ಮೆರವಣಿಗೆ ಆರಂಭಗೊಳ್ಳಲು ಕೆಲವೇ ಕ್ಷಣಗಳು ಬಾಕಿ ಇರುವಾಗ ಆತನ ಕೋವಿಡ್-19 ಪರೀಕ್ಷಾ ವರದಿ ಬಂದಿದೆ. ಮೇ 22ರಂದು ಆತ ಕೋವಿಡ್ ಪರೀಕ್ಷೆ ಮಾಡಿಸಿದ್ದರೆ ಮೇ 24ರಂದು ಈ ವರದಿ ಬಂದಿತ್ತು.
ವ್ಯಾಕ್ಸಿನ್ ಗೆ ಕಮಿಷನ್ ಪಡೆದ ಆರೋಪ; ಇದು ನನ್ನ ವಿರುದ್ಧ ಷಡ್ಯಂತ್ರ; ಕ್ರಿಮಿನಲ್ ಕೇಸ್ ದಾಖಲಿಸುತ್ತೇನೆ ಎಂದ ಶಾಸಕ ರವಿ ಸುಬ್ರಹ್ಮಣ್ಯ
ಕೂಡಲೇ ಪೊಲೀಸ್ ಸಿಬ್ಬಂದಿಯ ತಂಡವೊಂದು ಮದುಮಗನ ಮನೆಗೆ ಆಗಮಿಸಿದ್ದು, ಮದುವೆ ಮೆರವಣಿಗೆಯನ್ನು ನಿಲ್ಲಿಸಿದ್ದಾರೆ. ಮದುವೆ ಕಾರ್ಯಕ್ರಮವನ್ನು ರದ್ದು ಮಾಡಿದ್ದು, ಮದುಮಗ ಈಗ ಕ್ವಾರಂಟೈನ್ ಕೇಂದ್ರದಲ್ಲಿದ್ದಾನೆ.
ತಾಯಿ ಅಂತ್ಯಸಂಸ್ಕಾರ ಮುಗಿಸಿ ಕೂಡಲೇ ಕರ್ತವ್ಯಕ್ಕೆ ಹಾಜರಾದ ಪೊಲೀಸ್ ಅಧಿಕಾರಿ
“ಇಲ್ಲಿನ ಮೌದಾಹಾ ಸಮುದಾಯ ಆರೋಗ್ಯ ಕೇಂದ್ರದ ಡಾ. ಅನಿಲ್ ಸಚನ್ ಮಾತನಾಡಿ, “ಮದುಮಗನನ್ನು ಸುಮೆರ್ಪುರ ಕ್ವಾರಂಟೈನ್ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಸ್ಥಳದಲ್ಲೇ ಕೋವಿಡ್ ಪರೀಕ್ಷೆಯನ್ನು ನಡೆಸಿದ ನಾವು ಆತನ ಕುಟುಂಬದ ಸದಸ್ಯರು ಹಾಗೂ ಇತರ ಅತಿಥಿಗಳಿಗೆ ಸ್ವಯಂ ಪ್ರೇರಣೆಯಿಂದ ತಂತಮ್ಮ ಮನೆಗಳಲ್ಲಿ 10 ದಿನಗಳ ಮಟ್ಟಿಗೆ ಐಸೋಲೇಟ್ ಮಾಡಿಕೊಳ್ಳಲು ಸೂಚಿಸಿದ್ದೇವೆ” ಎಂದು ಹೇಳಿದ್ದಾರೆ.