alex Certify ತಾಯಿ ಅಂತ್ಯಸಂಸ್ಕಾರ ಮುಗಿಸಿ ಕೂಡಲೇ ಕರ್ತವ್ಯಕ್ಕೆ ಹಾಜರಾದ ಪೊಲೀಸ್ ಅಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿ ಅಂತ್ಯಸಂಸ್ಕಾರ ಮುಗಿಸಿ ಕೂಡಲೇ ಕರ್ತವ್ಯಕ್ಕೆ ಹಾಜರಾದ ಪೊಲೀಸ್ ಅಧಿಕಾರಿ

Odisha Cop Returns to Duty Hours After Cremating Mother, Helps Evacuate People Ahead of Cyclone Yaas

ತಾಯಿಯ ಅಂತ್ಯಕ್ರಿಯೆ ಮುಗಿಸಿದ ಕೆಲವೇ ಗಂಟೆಗಳ ಒಳಗೆ ಕರ್ತವ್ಯಕ್ಕೆ ಹಾಜರಾದ ಒಡಿಶಾದ ಕೇಂದ್ರಪಾಡ ಜಿಲ್ಲೆಯ ಪೊಲೀಸ್‌ ಪೇದೆಯೊಬ್ಬರು ಚಂಡಮಾರುತಕ್ಕೆ ಸಿಲುಕಿರುವ ಸಾರ್ವಜನಿಕರ ರಕ್ಷಣೆಯ ಕೆಲಸವನ್ನು ಮುಂದುವರೆಸಿದ್ದಾರೆ.

2019 ಹಾಗೂ 2020ರಲ್ಲಿ ಫಾನಿ ಹಾಗೂ ಅಂಫನ್‌ ಚಂಡಮಾರುತಗಳು ಮಾಡಿರುವ ನಷ್ಟವನ್ನ ಕಂಡಿರುವ ಆರಕ್ಷಕ ನಿರೀಕ್ಷಕರಾದ ಕಳಾಂದಿ ಬೆಹೆರಾ, ಚಂಡಮಾರುತದಂಥ ಸಂಕಷ್ಟದ ಅವಧಿಯಲ್ಲಿ ತಮ್ಮ ಇಲಾಖೆಯ ಮಾನವ ಸಂಪನ್ಮೂಲದ ನ್ಯಾಯಯುತ ಬಳಕೆಯ ಬಗ್ಗೆ ಬಹಳ ಕಾಳಜಿ ಹೊಂದಿರುವುದೇ ಅವರ ಈ ಪರಮ ಬದ್ಧ ಕರ್ತವ್ಯನಿಷ್ಠೆಗೆ ಪ್ರೇರಣೆಯಯಾಗಿದೆ.

ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತೆ ಈ ನೀರು

“ಯಾಸ್ ಚಂಡಮಾರುತದಿಂದ ಕೆಳಮಟ್ಟದಲ್ಲಿ ಇರುವ ಗ್ರಾಮಗಳಲ್ಲಿ ಪ್ರವಾಹ ಸೃಷ್ಟಿಯಾಗಲಿದೆ ಎಂಬ ಅಂದಾಜುಗಳು ಇದ್ದವು. ನನ್ನ ಠಾಣಾ ವ್ಯಾಪ್ತಿಯಲ್ಲಿ ಬರುವ ಐದು ಪಂಚಾಯಿತಿಗಳಿಂದ ಜನರನ್ನು ಆಶ್ರಯ ಮನೆಗಳಿಗೆ ಸ್ಥಳಾಂತರಿಸಬೇಕಿತ್ತು,” ಎಂದು ಬೆಹೆರಾ ತಮ್ಮ ಕಣ್ಣ ಮುಂದೆ ಇರುವ ಪರಿಸ್ಥಿತಿ ವಿವರಿಸಿದ್ದಾರೆ.

ಹಣದ ಹೊಳೆಯಾಗ್ಬೇಕೆಂದ್ರೆ ಮನೆಯ ಈ ದಿಕ್ಕಿನಲ್ಲಿರಲಿ ಮನಿ ಪ್ಲಾಂಟ್

ತಾವು ಕೆಲಸ ಮಾಡುವ ಮರ್ಷಘಾಯ್‌ನಲ್ಲಿ ವಾಸವಿದ್ದ ಬೆಹೆರಾರ 85 ವರ್ಷ ವಯಸ್ಸಿನ ತಾಯಿಗೆ ಹೃದಯಾಘಾತವಾಗಿ ಮೇ 21ರಂದು ಇಹಲೋಕ ತ್ಯಜಿಸಿದ್ದರು. ತಾಯಿಯ ಅಂತ್ಯಸಂಸ್ಕಾರವನ್ನು ತಮ್ಮ ಗ್ರಾಮವಾದ ಜಾಜ್ಪುರದ ಬಿಂಝಾರ್ಪುರದಲ್ಲಿ ನೆರವೇರಿಸಿದ ಕೂಡಲೇ ಮರ್ಷಘಾಯ್‌ಗೆ ಮರಳಿದ ಬೆಹೆರಾ ರಕ್ಷಣಾ ಕಾರ್ಯದಲ್ಲಿ ಮತ್ತೆ ಬ್ಯುಸಿಯಾಗಿದ್ದಾರೆ.

ಯಾಸ್ ಚಂಡಮಾರುತ ನೆಲಕ್ಕಪ್ಪಳಿಸುವ ಮುನ್ನವೇ 2,100ಕ್ಕೂ ಹೆಚ್ಚು ಮಂದಿಯನ್ನು ಬೆಹೆರಾ ಹಾಗೂ ಅವರ ಸಹೋದ್ಯೋಗಿಗಳು ಸೇರಿಕೊಂಡು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...