ಉತ್ತರ ಪ್ರದೇಶದಲ್ಲಿ ಮಹಿಳೆಯರು ಹಾಗೂ ಬಾಲಕಿಯರ ಮೇಲಿನ ದೌರ್ಜನ್ಯಕ್ಕೆ ಅಂತ್ಯವೇ ಇಲ್ಲ ಎಂಬಂತಾಗಿದೆ. ಮೀರತ್ ಜಿಲ್ಲೆಯಲ್ಲಿ ವರದಿಯಾದ ಹೊಸ ಘಟನೆಯೊಂದರಲ್ಲಿ ಬರ್ತಡೇ ಪಾರ್ಟಿ ಮಾಡುವ ನೆಪದಲ್ಲಿ ಬಾಲಕಿಯನ್ನ ಹೋಟೆಲ್ಗೆ ಕರೆಸಿಕೊಂಡು ಆಕೆಯ ಮೇಲೆ ಅತ್ಯಾಚಾರವೆಸಗಲಾಗಿದೆ.
ಈ ಸಂಬಂಧ ಸಂತ್ರಸ್ತೆಯ ಪೋಷಕರು ನೀಡಿದ ದೂರನ್ನ ಆಧರಿಸಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತೆಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆರೋಪಿಗಳ ಪೋಷಕರು ಮಾತ್ರ ಪೊಲೀಸ್ ಠಾಣೆಗೆ ತಲುಪಿ ಬಾಲಕಿಯ ಆರೋಪವನ್ನ ತಿರಸ್ಕರಿಸಿದ್ದಾರೆ.
ಹುಟ್ಟುಹಬ್ಬದ ನೆಪದಲ್ಲಿ ಹೋಟೆಲ್ ಗೆ ಕರೆದು ಅತ್ಯಾಚಾರ
ನಾವು ಅತ್ಯಾಚಾರದ ದೂರನ್ನ ಸ್ವೀಕರಿಸಿದ್ದೇವೆ. ಸಂತ್ರಸ್ತೆಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಹಾಗೂ ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.