alex Certify ಪಾತಾಳಕ್ಕಿಳಿದ ʼಹೂಕೋಸುʼ ಬೆಲೆ: ಆಕ್ರೋಶಗೊಂಡ ರೈತ ಮಾಡಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾತಾಳಕ್ಕಿಳಿದ ʼಹೂಕೋಸುʼ ಬೆಲೆ: ಆಕ್ರೋಶಗೊಂಡ ರೈತ ಮಾಡಿದ್ದೇನು ಗೊತ್ತಾ…?

ಉತ್ತರ ಪ್ರದೇಶದ ಪಿಲಿಭಿತ್ ​ಎಪಿಎಂಸಿಯಲ್ಲಿ ವ್ಯಾಪಾರಿಗಳು, ರೈತರು ಬೆಳೆದ ಹೂಕೋಸುಗಳಿಗೆ ಕ್ಷುಲ್ಲಕ ದರ ನಿಗದಿ ಮಾಡಿದ್ದು ಇದರಿಂದ ಆಕ್ರೋಶಕ್ಕೊಳಗಾದ ರೈತ ತಾನು ಬೆಳೆದ 10 ಕ್ವಿಂಟಲ್​​ ಹೂಕೋಸುಗಳನ್ನ ರಸ್ತೆಗೆ ಎಸೆದಿದ್ದಾನೆ. ಮಾತ್ರವಲ್ಲದೇ ಅದನ್ನ ಉಚಿತವಾಗಿ ಎತ್ತುಕ್ಕೊಂಡು ಹೋಗಲು ಗ್ರಾಹಕರಿಗೆ ಅವಕಾಶ ಮಾಡಿಕೊಟ್ಟಿದ್ದಾನೆ.

ಜಹನಾಬಾದ್​ ಪಟ್ಟಣದ ಮೊಹಮ್ಮದ್​ ಸಲೀಂ ತಾವು ಬೆಳೆದ ಬೆಳೆಗೆ ಪ್ರತಿ ಕೆಜಿಗೆ 1 ರೂಪಾಯಿ ನೀಡುತ್ತೇನೆಂದು ವ್ಯಾಪಾರಿಗಳು ಹೇಳಿದ್ದರಿಂದ ಆಕ್ರೋಶಕ್ಕೆ ಒಳಗಾಗಿದ್ದಾರೆ. ಅದು ಎಪಿಎಂಸಿ ಒಳಕ್ಕೆ ತಮ್ಮ ಹೂಕೋಸು ಬೆಳೆ ತರಲು ಅವರು ಖರ್ಚು ಮಾಡಿದ ಸಾರಿಗೆ ವೆಚ್ಚಕ್ಕೆ ಸಮನಾಗಿತ್ತು.

ನಾನು ಅರ್ಧ ಎಕರೆ ಭೂಮಿಯನ್ನ ಹೊಂದಿದ್ದೇನೆ. ಈ ಜಮೀನಿನಲ್ಲಿ ನಾನು ಹೂಕೋಸು ಕೃಷಿ ಮಾಡಿದ್ದೆ. ಬೀಜ, ನೀರಾವರಿ ವ್ಯವಸ್ಥೆ, ರಸಗೊಬ್ಬರಗಳಿಗಾಗಿ ನಾನು ಸುಮಾರು 8 ಸಾವಿರ ರೂಪಾಯಿ ವ್ಯಯಿಸಿದ್ದೇನೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕೆಜಿ ಹೂಕೋಸಿಗೆ 12 ರಿಂದ 14 ರೂಪಾಯಿ ಇದೆ. ಆದರೆ ನನಗೆ 1 ರೂಪಾಯಿ ಕೊಡೋದಾಗಿ ಹೇಳಿದ್ದಾರೆ. ಹೀಗಾಗಿ ನನಗೆ ಹೂಕೋಸುಗಳನ್ನ ಎಸೆಯೋದು ಬಿಟ್ಟು ಬೇರೆ ದಾರಿ ಕಾಣಲಿಲ್ಲ ಎಂದು ರೈತ ನೋವನ್ನ ತೋಡಿಕೊಂಡಿದ್ದಾನೆ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...