
ಜರ್ಸುಗುಡಾ ಜಿಲ್ಲೆಯ ದೇಬಾಶಿಶ್ ಪಟ್ನಾಯಕ್ ತಮ್ಮ ಆರತಕ್ಷತೆ ದಿನದಂದು ಸ್ನೇಹಿತರು ನೀಡಿದ ಗಿಫ್ಟ್ ನೋಡಿ ಶಾಕ್ ಆಗಿದ್ದಾರೆ. ಆರತಕ್ಷತೆ ಕಾರ್ಯಕ್ರಮದಲ್ಲಿ ಅತಿಥಿಗಳ ಜೊತೆ ಫೋಟೋ ತೆಗೆಸಿಕೊಳ್ಳೋದ್ರಲ್ಲಿ ಬ್ಯುಸಿಯಾಗಿದ್ದ ಪಟ್ನಾಯಕ್ ದಂಪತಿ ಸ್ನೇಹಿತರು ಮಂಟಪಕ್ಕೆ ಒಂದು ಕ್ಯಾನ್ ಪೆಟ್ರೋಲ್ ತಂದಿದ್ದನ್ನ ಕಂಡು ಒಮ್ಮೆ ಆಶ್ಚರ್ಯಚಕಿತರಾದ್ರು.
ಆದರೆ ಬಳಿಕ ಇದನ್ನೇ ಗಿಫ್ಟ್ ರೂಪದಲ್ಲಿ ನೀಡಿದ ಸ್ನೇಹಿತರು ಪೆಟ್ರೋಲ್ ಬಹಳ ದುಬಾರಿಯಾಗಿದೆ ಎಂದು ಕ್ಯಾನ್ ಮೇಲೆ ಬರೆದಿದ್ದಾರೆ. ಆರತಕ್ಷತೆ ಕಾರ್ಯಕ್ರಮಕ್ಕೆ ಬಂದ ಪ್ರತಿಯೊಬ್ಬರು ಈ ವಿಚಿತ್ರ ಗಿಫ್ಟ್ ಕಂಡು ನಗೆಯಾಡಿದ್ದಾರೆ.