ನವದೆಹಲಿ: ಕೇಂದ್ರ ಸರ್ಕಾರ ಅನ್ಲಾಕ್ -4 ಮಾರ್ಗಸೂಚಿ ಪ್ರಕಟಿಸಿದ್ದು, ಸೆಪ್ಟಂಬರ್ 30 ರವರೆಗೂ ಶಾಲಾ-ಕಾಲೇಜು, ಚಿತ್ರಮಂದಿರ, ಬಾರ್ ಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ.
9 ರಿಂದ 12ನೇ ತರಗತಿ ಮಕ್ಕಳಿಗೆ ಶಾಲೆಗೆ ಹೋಗುವ ಅವಕಾಶ ನೀಡಲಾಗಿದೆ. ಆದರೆ ಪಾಠ ಇರುವುದಿಲ್ಲ. ಶಿಕ್ಷಕರ ಸಲಹೆ ಕೇಳಬಹುದು. ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಷರತ್ತಿನ ಅನುಮತಿ ನೀಡಲಾಗಿದೆ.
ಸೆಪ್ಟೆಂಬರ್ 21 ರಿಂದ ಅನ್ವಯವಾಗುವಂತೆ 9 ರಿಂದ 12ನೇ ತರಗತಿ ಮಕ್ಕಳು ಶಿಕ್ಷಕರ ಮಾರ್ಗದರ್ಶನ ಪಡೆಯಲು ಪೋಷಕರ ಅನುಮತಿಯೊಂದಿಗೆ ಶಾಲೆಗೆ ಹೋಗಬಹುದಾಗಿದೆ ಎಂದು ಹೇಳಲಾಗಿದೆ.
ಇನ್ನು ಚಿತ್ರಮಂದಿರ, ಬಾರ್ ಸೆಪ್ಟಂಬರ್ 30ರವರೆಗೆ ಬಂದ್ ಮಾಡಬೇಕಿದೆ. ಮನರಂಜನಾ ಪಾರ್ಕ್ ಗಳಿಗೆ ಅನುಮತಿ ನೀಡಿಲ್ಲ.