alex Certify BIG BREAKING: ಅನ್ಲಾಕ್ ಮಾರ್ಗಸೂಚಿ ರಿಲೀಸ್‌ – ಮೆಟ್ರೋ ಶುರು, ಥಿಯೇಟರ್ ಓಪನ್ – ಶಾಲೆಗೆ ಮಕ್ಕಳು ಬರಬಹುದು – ಸಭೆ, ಸಮಾರಂಭಕ್ಕೂ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಅನ್ಲಾಕ್ ಮಾರ್ಗಸೂಚಿ ರಿಲೀಸ್‌ – ಮೆಟ್ರೋ ಶುರು, ಥಿಯೇಟರ್ ಓಪನ್ – ಶಾಲೆಗೆ ಮಕ್ಕಳು ಬರಬಹುದು – ಸಭೆ, ಸಮಾರಂಭಕ್ಕೂ ಅವಕಾಶ

ನವದೆಹಲಿ: ಕೇಂದ್ರ ಸರ್ಕಾರದಿಂದ ಅನ್ಲಾಕ್ -4 ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದ್ದು ಸೆಪ್ಟಂಬರ್ 7ರಿಂದ ದೇಶಾದ್ಯಂತ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ.

ಶಾಲೆಯಲ್ಲಿ ಆನ್ಲೈನ್ ಶಿಕ್ಷಣಕ್ಕೆ ಅವಕಾಶ ನೀಡಲಾಗಿದೆ. ಶಿಕ್ಷಕರು, ಸಿಬ್ಬಂದಿ ಹಾಗೂ 9 ರಿಂದ 12 ನೇ ತರಗತಿವರೆಗಿನ ವಿದ್ಯಾರ್ಥಿಗಳು ಭೇಟಿ ನೀಡಬಹುದು. ಸಭೆ-ಸಮಾರಂಭಗಳಲ್ಲಿ 100 ಜನ ಸೇರಲು ಅವಕಾಶ ನೀಡಲಾಗಿದೆ.

ಮಕ್ಕಳು ಪೋಷಕರ ಅನುಮತಿಯೊಂದಿಗೆ ಶಾಲೆಗೆ ಬರಬಹುದಾಗಿದೆ ಎಂದು ಕೇಂದ್ರ ಸರ್ಕಾರದಿಂದ ಅನ್ಲಾಕ್ -4 ಮಾರ್ಗಸೂಚಿ ಪ್ರಕಟಿಸಲಾಗಿದೆ. ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸೆಪ್ಟಂಬರ್ 30 ರವರೆಗೆ ಶಾಲಾ-ಕಾಲೇಜುಗಳನ್ನು ತೆರೆಯುವಂತಿಲ್ಲ. ಆದರೆ ಪೋಷಕರ ಅನುಮತಿ ಪಡೆದು ಶಾಲೆಗೆ ಭೇಟಿ ನೀಡಬಹುದಾಗಿದೆ. ಪ್ರಮುಖವಾಗಿ ಸೆಪ್ಟಂಬರ್ 7 ರಿಂದ ದೇಶಾದ್ಯಂತ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ. ಚಿತ್ರಮಂದಿರ, ಸ್ವಿಮ್ಮಿಂಗ್ ಪೂಲ್ ತೆರೆಯಲು ಅವಕಾಶ ನೀಡಲಾಗಿಲ್ಲ. ಸೆಪ್ಟೆಂಬರ್ 21 ರಿಂದ ಓಪನ್ ಥಿಯೇಟರ್ ತೆರೆಯಲು ಅವಕಾಶ ನೀಡಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...