ಆನ್ ಡ್ಯೂಟಿಯಲ್ಲಿದ್ದ ರೈಲ್ವೇ ಪೊಲೀಸರ ತ್ವರಿತ ಪ್ರತಿಕ್ರಿಯೆಯಿಂದ ಮಧ್ಯ ಮಯಸ್ಸಿನ ವ್ಯಕ್ತಿಯೊಬ್ಬರ ಜೀವ ಉಳಿದ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ರೈಲ್ವೇ ಭದ್ರತಾ ದಳದ ಪೇದೆ ಕೆ. ಸಾಹು ಹಾಗೂ ಮಹಾರಾಷ್ಟ್ರ ಭದ್ರತಾ ಪಡೆಯ ಸೋಮ್‌ನಾಥ್ ಮಹಾಜನ್ ಆ ವ್ಯಕ್ತಿಯ ಜೀವ ಉಳಿಸಿದ ಹೀರೋಗಳಾಗಿದ್ದಾರೆ. ಕಲ್ಯಾಣ್ ರೈಲ್ವೇ ನಿಲ್ದಾಣದ ಪ್ಲಾಟ್‌ಫಾರಂ ಮೇಲೆ ನಿಂತಿದ್ದ 52 ವರ್ಷ ವಯಸ್ಸಿನ ಪ್ರಯಾಣಿಕರೊಬ್ಬರು ಚಲಿಸುತ್ತಿರುವ ರೈಲಿನಿಂದ ಇಳಿಯುತ್ತಲೇ ಪ್ಲಾಟ್‌ಫಾರಂ ಹಾಗೂ ಹಳಿಗಳ ನಡುವೆ ಸಿಲುಕಿಕೊಂಡಿದ್ದಾರೆ.
ಆ ಕ್ಷಣದಲ್ಲಿ ಅಲ್ಲಿಯೇ ಇದ್ದ ಭದ್ರತಾ ಸಿಬ್ಬಂದಿ ಈ ವ್ಯಕ್ತಿ ಹಾಗೂ ಆತನ ಪುತ್ರನನ್ನೂ ಸಹ ಕೂಡಲೇ ಮೇಲಕ್ಕೆಳೆದುಕೊಂಡು ಅವರ ಜೀವ ಉಳಿಸಿದ್ದಾರೆ.