ಮಹಿಳೆಯೊಬ್ಬರಿಂದ 71 ಲಕ್ಷ ರೂ.ಗಳನ್ನು ಕದ್ದ ಆರೋಪದಲ್ಲಿ ಒಬ್ಬ ಪುರುಷ ಹಾಗೂ ಆತನ ಸಹಚರೆಯನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜನವರಿ 3ರಂದು ಮುಮ್ತಾಜ್ ಶೇಖ್ ಹೆಸರಿನ ಮಹಿಳೆಯೊಬ್ಬರು ಕೊಟ್ಟ ದೂರಿನ ಅನ್ವಯ ಧಾರಾವಿ ಪ್ರದೇಶದಲ್ಲಿರುವ ಈ ವ್ಯಕ್ತಿ ಹಾಗೂ ಮುಂಬ್ರಾ ಪ್ರದೇಶದಲ್ಲಿರುವ ಆತನ ಸಂಗಾತಿಯನ್ನು ಬಂಧಿಸಿದ್ದಾರೆ ಪೊಲೀಸರು. ದೂರುದಾರ ಮಹಿಳೆಯ ಮನೆಯಲ್ಲಿರುವ ನಗದನ್ನು ಕದ್ದಲ್ಲಿ 10000 ರೂ.ಗಳನ್ನು ಕೊಡುವುದಾಗಿ ಆಪಾದಿತ ಪುರುಷ ತನ್ನ ಮಹಿಳಾ ಸಂಗಾತಿಗೆ ಆಮಿಷ ಒಡ್ಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆ ವಸತಿ ಪ್ರದೇಶದ ಸಿಸಿ ಟಿವಿ ಫುಟೇಜ್‌ಗಳನ್ನು ಅಧ್ಯಯನ ಮಾಡಿದ ಪೊಲೀಸರು, ನಗದಿನ ಬ್ಯಾಗನ್ನು ಹೊತ್ತೊಯ್ಯುತ್ತಿದ್ದ ಶಂಕಿತೆಯನ್ನು ಪತ್ತೆ ಮಾಡಿ ಆಕೆಯ ಮುಂಬ್ರಾ ನಿವಾಸದಿಂದ ಬಂಧಿಸಿದ್ದಾರೆ.
ದಂಡ ತಪ್ಪಿಸಿಕೊಳ್ಳಲು 30 ಕೆಜಿ ಕಿತ್ತಳೆ ಹಣ್ಣು ತಿಂದವರ ಗತಿ ಈಗ ಏನಾಗಿದೆ ಗೊತ್ತಾ…?
ಕದ್ದ ನಗದನ್ನು ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದ ಆರೋಪಿಯಿಂದ 56.82 ಲಕ್ಷ ರೂ.ಗಳ ಜೊತೆಗೆ 30 ಸಾವಿರ ರೂ.ಗಳ ಮೊಬೈಲ್ ಫೋನ್ ಒಂದನ್ನು ಪೊಲೀಸರು ವಶಕ್ಕೆ ಪಡೆದಿದ್ಧಾರೆ.
ಕದ್ದ ದುಡ್ಡಿನೊಂದಿಗೆ ಉತ್ತರ ಪ್ರದೇಶಕ್ಕೆ ಓಡಿ ಹೋಗಿದ್ದ ಈತ ಐಷಾರಾಮಿ ಹೊಟೇಲೊಂದರಲ್ಲಿ ಕಾಲ ಕಳೆದಿದ್ದು, ಮಾದಕ ದ್ರವ್ಯ ಹಾಗೂ ಹೆಣ್ಣಿನ ಚಟಕ್ಕೆಂದು 14 ಲಕ್ಷ ರೂ.ಗಳನ್ನು ಬಳಸಿಕೊಂಡಿದ್ದಾನೆ.