ಕೃಷಿ ಕ್ಷೇತ್ರದ ಸಂಬಂಧ ಕೇಂದ್ರ ಸರ್ಕಾರ ತಂದಿರುವ ಹೊಸ ಕಾಯಿದೆಗಳನ್ನು ವಿರೋಧಿಸಿ ದೇಶದ ವಿವಿಧ ಮೂಲೆಗಳಿಂದ ಪ್ರತಿಭಟನೆ ಮಾಡಲು ದೆಹಲಿಗೆ ಬಂದಿರುವ ರೈತರ ಸುದ್ದಿ ಭಾರೀ ಸದ್ದು ಮಾಡುತ್ತಿದೆ.
ಹರಿಯಾಣದ ಗುರುಗ್ರಾಮದ ವೈದ್ಯರಾದ ಡಾ. ಸಾರಿಕಾ ವರ್ಮಾ ಹಾಗೂ ಡಾ. ಕರಣ್ ಜುನೇಜಾ ಈ ರೈತರಿಗೆಂದು ಮೆಡಿಕಲ್ ಕ್ಯಾಂಪ್ ತೆರೆದಿದ್ದು, ಪ್ರತಿಭಟನಾನಿರತ ರೈತರಿಗೆ ಅಗತ್ಯವಿರುವ ವೈದ್ಯಕೀಯ ನೆರವನ್ನು ಸಾಧ್ಯವಿರುವಷ್ಟು ಮಾಡಿಕೊಡುವ ಯತ್ನ ನಡೆಸಿದ್ದಾರೆ.
ಕೋವಿಡ್-19 ಸಾಂಕ್ರಮಿಕ ಹಬ್ಬದೇ ಇರಲಿ ಎಂದು ಮಾಸ್ಕ್‌ಗಳನ್ನು ವಿತರಿಸುತ್ತಿರುವ ಈ ವೈದ್ಯರ ಜೋಡಿ, ಪ್ರತಿಭಟನೆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.