ಜಮ್ಮು ಮತ್ತು ಕಾಶ್ಮೀರದ ಲಡಾಖ್ ಚೀನಾಗೆ ಸೇರಿದ್ದು ಅಂತಾ ತೋರಿಸಿದ್ದ ಟ್ವಿಟರ್ ಪ್ರಮಾದದ ಕುರಿತು ಸಂಸದೀಯ ಸಮಿತಿ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಟ್ವಿಟರ್ ಸಂಸ್ಥೆ ಲಿಖಿತ ರೂಪದಲ್ಲಿ ಕ್ಷಮೆ ಯಾಚಿಸಿದೆ.
ಟ್ವಿಟರ್ ಮಾಡಿರುವ ಈ ತಪ್ಪಿನ ಬಗ್ಗೆ ಚರ್ಚೆ ನಡೆಸಿದ ಸಂಸದೀಯ ಸಮಿತಿ ಟ್ವಿಟರ್ ಸಂಸ್ಥೆಯನ್ನ ತರಾಟೆಗೆ ತೆಗೆದುಕೊಂಡಿದ್ದು ಮಾತ್ರವಲ್ಲದೇ ಲಿಖಿತ ರೂಪದಲ್ಲಿ ಹಾಗೂ ಅಫಿಡವಿಟ್ ಮೂಲಕ ಕ್ಷಮೆ ಯಾಚಿಸುವಂತೆ ಸೂಚನೆ ನೀಡಿತ್ತು. ಸಂಸದೀಯ ಸಮಿತಿಯ ಆದೇಶಕ್ಕೆ ತಲೆಬಾಗಿದ ಟ್ವಿಟರ್ ಸಂಸ್ಥೆ ಲಿಖಿತ ರೂಪದಲ್ಲಿ ಕ್ಷಮೆಯಾಚಿಸಿದೆ.
ಜಮ್ಮು ಹಾಗೂ ಕಾಶ್ಮೀರ ಮತ್ತು ಲೇಹ್ ಪ್ರಾಂತ್ಯ ಚೀನಾಗೆ ಸೇರಿದ್ದು ಅಂತಾ ಟ್ವಿಟರ್ ವರದಿ ಮಾಡಿತ್ತು. ಈ ಬಗ್ಗೆ ಭಾರತೀಯ ಟ್ವೀಟಿಗರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆಯೇ ತನ್ನ ತಪ್ಪನ್ನ ಸರಿ ಮಾಡಿಕೊಂಡಿತ್ತು .