ಕೊರೊನಾ ವೈರಸ್ ನಿಯಂತ್ರಣ ಮಾಡುವ ಸಲುವಾಗಿ ಸರ್ಕಾರ ಪ್ರಯಾಣದ ವೇಳೆ ಸಾಕಷ್ಟು ಕೊರೊನಾ ಮಾರ್ಗಸೂಚಿಗಳನ್ನ ವಿಧಿಸಿದೆ. ನೌಕಾ ಯಾನ ಹಾಗೂ ವಿಮಾನಯಾನವನ್ನ ಮಾಡುವಾಗಂತೂ ಎಷ್ಟು ಎಚ್ಚರಿಕೆಯಿಂದ ಇದ್ದರೂ ಅದು ಕಡಿಮೆಯೇ.
ಸಾಕಷ್ಟು ಮುಂಜಾಗ್ರತಾ ಕ್ರಮಗಳ ಜೊತೆಗೆ ಪ್ರಯಾಣ ಮಾಡೋದು ಹೆಚ್ಚು ಸೂಕ್ತ. ಹಾಗಾದ್ರೆ ದೂರದ ಪ್ರಯಾಣದ ವೇಳೆ ನಾವು ಗಮನದಲ್ಲಿಡಬೇಕಾದ ಮುಖ್ಯ ಅಂಶಗಳು ಯಾವುವು ಅನ್ನೋದನ್ನ ನೋಡೋಣ .
ಫೇಸ್ ಮಾಸ್ಕ್: ಕೊರೊನಾವನ್ನ ತಡೆಗಟ್ಟುವ ಅತ್ಯಂತ ಪ್ರಮುಖ ಅಸ್ತ್ರವೆಂದರೆ ಅದು ಮಾಸ್ಕ್. ದೂರದ ಪ್ರಯಾಣ ಎಂದಲ್ಲ. ಮನೆಯಿಂದ ಹೊರಗೆ ಕಾಲಿಟ್ಟಿರಿ ಅಂದರೆ ಮಾಸ್ಕ್ ಧರಿಸೋದನ್ನ ಮರೆಯದಿರಿ.
ಸ್ಯಾನಿಟೈಸರ್: ವಿಮಾನ ಪ್ರಯಾಣ ಮಾಡುವ ವೇಳೆ ನೀವು ಎಷ್ಟೇ ಸಾಮಾಜಿಕ ಅಂತರ ಕಾಪಾಡಿಕೊಂಡರೂ ಸಹ ಕೆಲವೊಂದು ವಸ್ತುಗಳನ್ನ ಮುಟ್ಟಲೇ ಬೇಕಾಗುತ್ತೆ. ವಸ್ತುಗಳಿಂದಲೂ ಕೊರೊನಾ ಹರಡುವ ಅಪಾಯ ಹೆಚ್ಚು. ಹೀಗಾಗಿ ಪ್ರಯಾಣದ ವೇಳೆ ಸ್ಯಾನಿಟೈಸರ್ ಬಳಸೋದನ್ನ ಮರೆಯದಿರಿ.
ಸಾಮಾಜಿಕ ಅಂತರ: ವಿಮಾನ ನಿಲ್ದಾಣ ಅಂದಮೇಲೆ ಅಲ್ಲಿ ಜನಸಂದಣಿಗೇನು ಕಡಿಮೆ ಇರೋದಿಲ್ಲ. ಹೀಗಾಗಿ ಆದಷ್ಟು ಸಾಮಾಜಿಕ ಅಂತರ ಕಾಪಾಡೋದನ್ನ ನಿರ್ಲಕ್ಷಿಸದಿರಿ.
ಡಿಜಿಟಲ್ ಪೇಮೆಂಟ್: ಕೊರೊನಾ ವೈರಸ್ ನಿರ್ಜಿವ ವಸ್ತುಗಳ ಮೇಲೂ ಜೀವಂತವಾಗಿ ಇರೋ ಕಾರಣ ನಗದು ವ್ಯವಹಾರವನ್ನ ಆದಷ್ಟು ಕಡಿಮೆ ಮಾಡಿ. ಅದರ ಬಲದು ಡಿಜಿಟಲ್ ಪೇಮೆಂಟ್ಗೆ ಹೆಚ್ಚಿನ ಆದ್ಯತೆ ನೀಡಿ.