ಹೈದರಾಬಾದ್ನಲ್ಲಿ ರೈಲುಗಳಲ್ಲಿನ ಎಸಿ ಕೋಚ್ಗಳಿಗೆ ಮಾತ್ರ ಎಂಟ್ರಿ ನೀಡಿ ಕಳ್ಳತನ ಮಾಡ್ತಿದ್ದ ವಿಚಿತ್ರ ಕಳ್ಳನನ್ನ ಬಂಧಿಸಲಾಗಿದೆ. ಪದವಿಧರನಾಗಿರುವ ಮದ್ದೂರಿ ವೆಂಕಟ ವಿವೇಕಾನಂದನನ್ನ ಸೆಕುಂದರಾಬಾದ್ನ ರೈಲ್ವೆ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.
ಆಂಧ್ರ ಪ್ರದೇಶದಿಂದ ಹೈದಾರಾಬಾದ್ ಕಡೆ ಬರುವ ರೈಲುಗಳಲ್ಲೇ ಈತ ಹೆಚ್ಚಾಗಿ ಕಳ್ಳತನ ಮಾಡುತ್ತಿದ್ದ. ಪೊಲೀಸರು ಈ ಹೈಟೆಕ್ ಕಳ್ಳನಿಂದ 3.50 ಲಕ್ಷ ರೂಪಾಯಿ ಮೌಲ್ಯದ 52 ಗ್ರಾಂ ಚಿನ್ನಾಭರಣ, ಒಂದು ಲ್ಯಾಪ್ಟಾಪ್ ಹಾಗೂ ನಗದನ್ನ ವಶಪಡಿಸಿಕೊಂಡಿದ್ದಾರೆ. ಈತನ ವಿರುದ್ಧ ತೆಲಂಗಾಣ ಹಾಗೂ ಆಂಧ್ರ ಪ್ರದೇಶಗಳಲ್ಲಿ 16 ಪ್ರಕರಣಗಳು ದಾಖಲಾಗಿವೆ.
ಗುಂಟೂರು ಹಾಗೂ ವಿಜಯವಾಡದಲ್ಲಿ ಪ್ರಕರಣ ದಾಖಲಾಗಿದ್ದರಿಂದ ಈತನನ್ನ ಈ ಹಿಂದೆಯೂ ಬಂಧಿಸಲಾಗಿತ್ತು. 2020ರಲ್ಲಿ ಜಾಮೀನಿನ ಮೇಲೆ ಹೊರಗಿದ್ದ ಈತ ಲಾಕ್ಡೌನ್ನಿಂದಾಗಿ ರೈಲುಗಳು ರದ್ದಾಗಿದ್ದರಿಂದ ಈತ ಕೆಲ ಸಮಯ ಕಳ್ಳತನ ಮಾಡದೇ ವಿರಾಮ ಪಡೆದಿದ್ದ. ಆದರೆ ಕೆಲ ದಿನಗಳ ಹಿಂದೆ ಮತ್ತೊಮ್ಮೆ ದರೋಡೆ ನಡೆಸಿದ್ದಾನೆ.
ಆಂಧ್ರ ಪ್ರದೇಶ ಮಚಲಿಪಟ್ಟಣಂ ಮೂಲದ ಈತ ಪದವಿ ಮಾಡೋದನ್ನ ಅರ್ಧದಲ್ಲೇ ನಿಲ್ಲಿಸಿ ಗಚಿಬೌಲಿ ಟೆಕ್ ಸಂಸ್ಥೆಯನ್ನ ಸೇರಿಕೊಂಡಿದ್ದ. ಈತನ ಪತ್ನಿ ಹಾಗೂ ಪೋಷಕರು ಮಚಲಿಪಟ್ಟಣಂನಲ್ಲೇ ಇದ್ದಾರೆ. ಎಸಿ ಕೋಚ್ನಲ್ಲೇ ಪ್ರಯಾಣಿಸುವ ಈತ ಯಾರೊಂದಿಗೂ ಮಾತನಾಡೋದಿಲ್ಲ. ಎಲ್ಲರೂ ಮಲಗಿದ್ದ ವೇಳೆ ಬ್ಯಾಗ್ಗಳನ್ನ ಕದ್ದು ಎಸ್ಕೇಪ್ ಆಗ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.