
ಸಂಪೂರ್ಣ ಹಿಮದ ಹೊದಿಕೆಯಿಂದ ಆವೃತವಾದ ಈ ನಯನಮನೋಹರ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಶಿಮ್ಲಾ – ಕಲ್ಕಾ ಮಾರ್ಗದಲ್ಲಿ ಸಂಚರಿಸುತ್ತಿದ್ದ ರೈಲು ತಾರಾದೇವಿ ನಿಲ್ದಾಣದಲ್ಲಿ ಸಂಚಾರ ಸ್ಥಗಿತಗೊಳಿಸಿದೆ. ನಿಲ್ದಾಣದಲ್ಲಿ ರೈಲಿಗೆ ಕಾಯುತ್ತಿದ್ದ ಪ್ರಯಾಣಿಕರು ಈ ಸುಂದರ ವಿಡಿಯೋವನ್ನ ಚಿತ್ರೀಕರಿಸಿದ್ದಾರೆ.
ಶಿಮ್ಲಾ – ಕಲ್ಕಾ ಪಾರಂಪರಿಕ ಮಾರ್ಗದ ತಾರಾದೇವಿ ನಿಲ್ದಾಣ ಹಿಮದ ಹೊದಿಕೆಯಿಂದಾವೃತವಾಗಿದೆ. ಇದೊಂದು ಅದ್ಭುತ ದೃಶ್ಯವಾಗಿದೆ ಎಂದು ರೈಲ್ವೆ ಸಚಿವಾಲಯ ವಿಡಿಯೋಗೆ ಶೀರ್ಷಿಕೆ ನೀಡಿದೆ.