alex Certify ರಾಷ್ಟ್ರ ರಾಜಧಾನಿಯಲ್ಲಿ ಬಡ ಮಕ್ಕಳಿಗಾಗಿ ಆಟಿಕೆ ಬ್ಯಾಂಕ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಷ್ಟ್ರ ರಾಜಧಾನಿಯಲ್ಲಿ ಬಡ ಮಕ್ಕಳಿಗಾಗಿ ಆಟಿಕೆ ಬ್ಯಾಂಕ್​

ಆರ್ಥಿಕ ಸಂಕಷ್ಟವನ್ನ ಅನುಭವಿಸುತ್ತಿರುವ ಕುಟುಂಬದಲ್ಲಿ ಜನಿಸಿದ ಮಕ್ಕಳಿಗೆ ನೆರವಾಗಲೆಂದು ಎಸ್​ಡಿಎಂಸಿ (ದಕ್ಷಿಣ ದೆಹಲಿ ಮುನ್ಸಿಪಲ್​ ಕಾರ್ಪೋರೇಷನ್​) ರಾಷ್ಟ್ರ ರಾಜಧಾನಿಯ ನಜಾಫ್​ಗರ್​ ಪ್ರದೇಶದಲ್ಲಿ ಆಟಿಕೆ ಬ್ಯಾಂಕ್​ ಒಂದನ್ನ ಉದ್ಘಾಟಿಸಿದೆ.

ಬಡತನದಿಂದಾಗಿ ಆಟಿಕೆ ಸಾಮಗ್ರಿಯನ್ನೂ ಕೊಳ್ಳಲಾಗದ ಮಕ್ಕಳಿಗೆ ಆಟಿಕೆಗಳನ್ನ ಪೂರೈಸುವ ಗುರಿಯನ್ನ ಈ ಬ್ಯಾಂಕ್​ ಹೊಂದಿದೆ.

ಸ್ವಚ್​ ಸವೇಕ್ಷನ್​ 2021 ದೃಷ್ಟಿಯಿಂದ ಈ ಬ್ಯಾಂಕ್​ನ್ನ ತೆರೆಯಲಾಗಿದೆ. ಈ ಆಟಿಕೆ ಬ್ಯಾಂಕ್​ನ್ನ ದಕ್ಷಿಣ ದೆಹಲಿ ಮೇಯರ್​ ಅನಾಮಿಕಾ ಮಿಹಿಲೇಶ್ ಸಿಂಗ್​ ಉದ್ಘಾಟನೆ ಮಾಡಿದ್ರು.

ಜನರು ತಮ್ಮ ಮಕ್ಕಳು ಬಳಕೆ ಮಾಡದ ಆಟಿಕೆಗಳನ್ನ ಬಿಸಾಡುವ ಬದಲು ಇಲ್ಲಿ ದೇಣಿಗೆ ರೂಪದಲ್ಲಿ ನೀಡಬಹುದಾಗಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ದಕ್ಷಿಣ ದೆಹಲಿ ಮೇಯರ್​ ಅನಾಮಿಕಾ ಮಿಹಿಲೇಶ್​ ಸಿಂಗ್​, ಆಟಿಕೆಗಳನ್ನ ಖರೀದಿಸಲು ಸಾಧ್ಯವಾಗದ ಮಕ್ಕಳು ಈ ಸ್ಥಳಕ್ಕೆ ಬಂದು ಆಟವಾಡಬಹುದು ಹಾಗೂ ಆಟಿಕೆಗಳನ್ನ ಕೊಂಡೊಯ್ಯಬಹುದು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...