alex Certify ಹರಿಯಾಣದ ಹಲವೆಡೆ ಇಂಟರ್ನೆಟ್ ಸ್ಥಗಿತ: ಪರ್ಯಾಯ ಮಾರ್ಗ ಹುಡುಕಿಕೊಂಡ ರೈತರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹರಿಯಾಣದ ಹಲವೆಡೆ ಇಂಟರ್ನೆಟ್ ಸ್ಥಗಿತ: ಪರ್ಯಾಯ ಮಾರ್ಗ ಹುಡುಕಿಕೊಂಡ ರೈತರು..!

ರಾಜ್ಯದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಯನ್ನ ಕಾಪಾಡುವುದಕ್ಕಾಗಿ ಹರಿಯಾಣದ 17 ಜಿಲ್ಲೆಗಳಲ್ಲಿ ಇಂಟರ್ನೆಟ್​ ಸೇವೆಯನ್ನ ಸ್ಥಗಿತಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಕೃಷಿ ಮಸೂದೆಯನ್ನ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರ ರೂಪಕ್ಕೆ ತಿರುಗಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ ಹಳ್ಳಿಹಳ್ಳಿಗೂ ತಮ್ಮ ಸಂದೇಶವನ್ನ ರವಾನಿಸಲು ರೈತರು ದೇವಸ್ಥಾನಗಳ ಧ್ವನಿವರ್ದಕಗಳನ್ನ ಬಳಕೆ ಮಾಡಲು ನಿರ್ಧರಿಸಿದ್ದಾರೆ.

ರೈತರಿಗೆ ಭರ್ಜರಿ ಗುಡ್ ನ್ಯೂಸ್: ಸಾಲ ಮನ್ನಾ ಬಗ್ಗೆ ನಾಳಿನ ಬಜೆಟ್ ನಲ್ಲಿ ಘೋಷಣೆ ಸಾಧ್ಯತೆ

17 ಜಿಲ್ಲೆಗಳ ಮುಖಂಡರು ಸೇರಿ ನಡೆಸಿದ ಸಭೆಯಲ್ಲಿ 306 ಜಿಲ್ಲೆಗಳಲ್ಲಿ ಪ್ರತ್ಯೇಕ ಕಮಿಟಿ ರಚಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಪ್ರತಿಭಟನಾಕಾರರನ್ನ ಪ್ರತಿಭಟನಾ ಜಾಗದಿಂದ ತೆರವು ಮಾಡಲು ಸರ್ಕಾರ ನಿರ್ಧರಿಸಿದಲ್ಲಿ ದೇಗುಲಗಳ ಧ್ವನಿವರ್ಧಕಗಳನ್ನ ಬಳಸಿ ಎಲ್ಲಾ ರೈತರಿಗೆ ಸಂದೇಶ ರವಾನಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.

ರೈತರ ವಿರುದ್ಧ ಸರ್ಕಾರ ಏನಾದರೂ ಕ್ರಮ ಕೈಗೊಂಡರೆ ರೈತರನ್ನ ಒಗ್ಗೂಡಿಸಲು ಗ್ರಾಮ ದೇವಾಲಯಗಳ ಧ್ವನಿವರ್ಧಕಗಳನ್ನ ಬಳಸಿ ತ್ವರಿತ ಪ್ರಕಟಣೆಯನ್ನ ನೀಡುತ್ತೇವೆ ಎಂದು ರೈತ ಮುಖಂಡ ಆಜಾದ್​ ಪಾಲ್ವಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...