ಬೇರೆ ಬೇರೆ ಕಾರಣಗಳಿಂದ ತವರು ನಾಡಿನಿಂದಲೇ ವನ್ಯ ಪ್ರಾಣಿಗಳು ಕಣ್ಮರೆಯಾಗೋಕೆ ಶುರುವಾದರೆ ತುಂಬಾನೇ ಬೇಸರ ಎನಿಸುತ್ತೆ. ಇನ್ನೇನು ಈ ಪ್ರಾಣಿ ಕಣ್ಣಿಗೆ ಸಿಗೋದೇ ಇಲ್ಲ ಎಂದುಕೊಂಡಿದ್ದ ಸಂದರ್ಭದಲ್ಲೇ ಆ ಪ್ರಾಣಿ ನಮ್ಮ ಕಣ್ಣಿಗೆ ಬಿದ್ದರೆ ಅದೊಂದು ಪರಮಾನಂದವೇ ಸರಿ.
ಇಂತಹದ್ದೇ ಒಂದು ಘಟನೆ ಮಹಾರಾಷ್ಟ್ರ ಔರಂಗಾಬಾದ್ ಜಿಲ್ಲೆಯ ಗೌತಲಾ ಆಟ್ರಮ್‌ಘಾಟ್ ಅಭಯಾರಣ್ಯದಲ್ಲಿ ಸಂಭವಿಸಿದೆ. ಈ ಅಭಯಾರಣ್ಯದಲ್ಲಿ ಬರೋಬ್ಬರಿ 81 ವರ್ಷದ ಬಳಿಕ ಹುಲಿ ಕಾಣಿಸಿಕೊಂಡಿದೆ. ಕೊನೆಯ ಬಾರಿಗೆ ಅಂದರೆ 1940ರಲ್ಲಿ ಇಲ್ಲಿ ಹುಲಿ ಕಾಣಿಸಿಕೊಂಡಿತ್ತು.
ಅಬ್ಬಬ್ಬಾ…! ಒಂದು ಗೊನೆ ಬಾಳೆಹಣ್ಣಿಗೆ ಒಂದೂವರೆ ಲಕ್ಷ ಪಾವತಿಸಿದ ಮಹಿಳೆ..!
ಇನ್ನು ಈ ವಿಚಾರವಾಗಿ ಮಾತನಾಡಿದ ಡಿವಿಶಿನಲ್ ಅರಣ್ಯಾಧಿಕಾರಿ ವಿಜಯ್ ಸತ್ಪುತೆ , ಯವತ್ಮಾಲ್ ತಿಪೇಶ್ವರ ಅಭಯಾರಣ್ಯದಿಂದ ಬಂದಿದೆ. ಅಂದರೆ ಈ ಹುಲಿ ತನ್ನ ಮೂಲ ಸ್ಥಾನದಿಂದ 330 ಕಿಲೋಮೀಟರ್ ದೂರದಲ್ಲಿದೆ.
ಗಂಡು ಹುಲಿ ಮಾರ್ಚ್ 11 – 12ರಂದೇ ಕಾಣಿಸಿಕೊಂಡಿದ್ದು ಮಾರ್ಚ್ 15ರಂದು ಕ್ಯಾಮರಾ ಕಣ್ಣಿಗೆ ಬಿದ್ದಿದೆ. ತನ್ನ ಮೂಲಸ್ಥಾನದಿಂದ ಇಲ್ಲಿಗೆ ಬರಲು ಹುಲಿ ಯಾವ ಮಾರ್ಗ ಕಂಡುಕೊಂಡಿದೆ ಅನ್ನೋದು ಇನ್ನಷ್ಟೇ ದೃಢವಾಗಬೇಕಿದೆ ಎಂದು ಹೇಳಿದ್ದಾರೆ.