alex Certify ಗನ್‌ ತೋರಿಸಿದರೂ ಎದೆಗುಂದದೆ ಡಕಾಯಿತರನ್ನು ಹೆಡೆಮುರಿ ಕಟ್ಟಿದ ಯುವಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗನ್‌ ತೋರಿಸಿದರೂ ಎದೆಗುಂದದೆ ಡಕಾಯಿತರನ್ನು ಹೆಡೆಮುರಿ ಕಟ್ಟಿದ ಯುವಕರು

Three Men Fight Armed Robbers Looting Jewellery Store in Maharashtra, Viral Video Earns Praise

ಶಸ್ತ್ರ ಸಜ್ಜಿತ ಡಕಾಯಿತರೊಂದಿಗೆ ಮೂವರು ಯುವಕರು ಹೋರಾಟ ನಡೆಸಿದ ಘಟನೆಯೊಂದು ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆದ ಘಟನೆ ಮಹಾರಾಷ್ಟ್ರದಲ್ಲಿ ಜರುಗಿದೆ.

ಮಹಾರಾಷ್ಟ್ರದ ಅಂಬರ್‌ನಾಥ್‌‌ನಲ್ಲಿ ಮಧ್ಯಾಹ್ನ 1:30ರ ವೇಳೆಯಲ್ಲಿಯೇ ಈ ಘಟನೆ ನಡೆದಿದೆ.

ಭವಾನಿ ಜ್ಯುವೆಲ್ಲರಿ ಹೆಸರಿನ ಅಂಗಡಿಯ ಮುಂದೆ ಬಂದ ಶಸ್ತ್ರಸಜ್ಜಿತ ಡಕಾಯಿತರನ್ನು ಕಂಡು ಅಲ್ಲಿದ್ದ ಕೆಲ ಯುವಕರು, ಅವರೊಂದಿಗೆ ಧೈರ್ಯವಾಗಿ ಕಾದಾಡಿರುವ ದೃಶ್ಯಾವಳಿಯನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ನೋಡನೋಡುತ್ತಲೇ ಆ ಜಾಗದಲ್ಲಿ ನೆರೆದಿದ್ದ ಸಾರ್ವಜನಿಕರು ಅಂಗಡಿಯತ್ತ ಧಾವಿಸಿ ಡಕಾಯಿತರ ಹೆಡೆಮುರಿ ಕಟ್ಟಿದ್ದಾರೆ.

ಇದೇ ವೇಳೆ ಮೂವರು ಸಾರ್ವಜನಿಕರು ಗಾಯಗೊಂಡಿದ್ದಾರೆ. ಗನ್‌ಗಳು ಹಾಗೂ ಚೂರಿಗಳನ್ನು ಹೊತ್ತುಕೊಂಡು ಬಂದಿದ್ದ ಡಕಾಯಿತರು ಫೈರಿಂಗ್ ಮಾಡಿದ ಕಾರಣ ವಾಸನ್ ಸಿಂಗ್ ಹಾಗೂ ಲಕ್ಷ್ಮಣ್ ಸಿಂಗ್ ಎಂಬ ಇಬ್ಬರು ಸಹೋದರರಿಗೆ ಗುಂಡೇಟು ಬಿದ್ದಿದ್ದು, ಅವರೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಂಗಡಿಯಲ್ಲಿ ಏಕಾಂಗಿಯಾಗಿ ಕೆಲಸ ಮಾಡುತ್ತಿದ್ದ ಭೈರವ್ ಸಿಂಗ್ ಹೆಸರಿನ 25 ವರ್ಷದ ಯುವಕನಿಗೆ ಚೂರಿಯಲ್ಲಿ ಇರಿದ ಕಾರಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...