alex Certify ಮಗುಚಿದ ಟ್ರಕ್: ರೊಚ್ಚಿಗೆದ್ದ ಜೇನ್ನೊಣಗಳ ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗುಚಿದ ಟ್ರಕ್: ರೊಚ್ಚಿಗೆದ್ದ ಜೇನ್ನೊಣಗಳ ದಾಳಿ

Thousands of Angry Bees Swarm Highway in Texas as Truck Carrying Hives Flips Over

ಹೆದ್ದಾರಿಯಲ್ಲಿ ಟ್ರಕ್ ಮಗುಚಿ ಬಿದ್ದ ಪರಿಣಾಮ ಒಳಗಿದ್ದ ಜೇನಿನ ಗೂಡು ಹಾನಿಹೊಳಗಾಗಿ, ರೊಚ್ಚಿಗೆದ್ದ ಜೇನ್ನೊಣಗಳು ಅವಾಂತರ ಸೃಷ್ಟಿಸಿವೆ.

ಜೇನಿನ ಗೂಡಿನ ಸಮೇತ ಜೇನ್ನೊಣಗಳನ್ನು ಟ್ರಕ್ ನಲ್ಲಿ ಸಾಗಿಸಲಾಗುತ್ತಿತ್ತು. ಟೆಕ್ಸಾಸ್ ನ ಆಂಟೋನಿಯೋ ಹೆದ್ದಾರಿಯ ಪಶ್ಚಿಮ ಎಲ್ಮಿರಾ ಸ್ಟ್ರೀಟ್ ಬಳಿ ತಿರುವು ಪಡೆಯುವಾಗ ಟ್ರಕ್ ಮಗುಚಿ ಬಿದ್ದಿದೆ.

ಇದರ ಪರಿಣಾಮ ಜೇನ್ನೋಣಗಳು ಗೂಡಿನಿಂದ ಬೇರ್ಪಟ್ಟಿದ್ದು, ರೊಚ್ಚಿಗೆದ್ದು ಹೆದ್ದಾರಿಯ ತುಂಬಾ ತುಂಬಿಕೊಂಡಿವೆ. ಒಂದೆಡೆ ಸಂಚಾರ ದಟ್ಟಣೆ ಸೃಷ್ಟಯಾಗಿದ್ದರೆ, ಇನ್ನೊಂದೆಡೆ ಹೆದ್ದಾರಿಯಲ್ಲಿ ಅಡ್ಡ ಮಲಗಿದ್ದ ಟ್ರಕ್ ಮೇಲೆತ್ತುವ ಕಾರ್ಯಾಚರಣೆಗೆ ಜೇನ್ನೊಣಗಳು ಅಡ್ಡಿಪಡಿಸಿದವು. ಟ್ರಕ್ ಚಾಲಕನನ್ನು ಕಾಪಾಡುವುದೂ ಕಷ್ಟವಾಗಿತ್ತು.

ಸರಿಸುಮಾರು 400 ಜೇನಿನ ಗೂಡು ಟ್ರಕ್ ನಲ್ಲಿದ್ದವು. ಪ್ರತಿ ಗೂಡಿನಲ್ಲಿ 20-25 ಸಾವಿರ ಜೇನ್ನೊಣಗಳು ಇದ್ದವು. ಅದೃಷ್ಟವಶಾತ್ ಎಲ್ಲ ಜೇನ್ನೊಣಗಳೂ ಗೂಡಿನಿಂದ ಹೊರ ಬಂದಿರಲಿಲ್ಲ.

ಎಂದಾದರೂ ಚಿಪ್ಸ್​ನಿಂದ ಆಲೂ ತಯಾರಿಸಿದ್ದೀರಾ….? ಇಲ್ಲ ಅಂದ್ರೆ ಈ ವಿಡಿಯೋ ನೋಡಿ

ಕೊನೆಗೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಫೋಮ್ ಸಿಂಪಡಿಸುವ ಮೂಲಕ ಪರಿಸ್ಥಿತಿ ನಿಯಂತ್ರಿಸಬೇಕಾಯಿತು. ಪರಿಣಾಮ ನೂರಾರು ಜೇನ್ನೊಣಗಳು ಸತ್ತು ಹೋಗಿದ್ದವು. ಈ ಕುರಿತು ಪ್ರತಿಕ್ರಿಯಿಸಿರುವ ಜೇನು ಸಾಕಣೆದಾರರ ಸಂಘದ ಅಧ್ಯಕ್ಷ ರಿಕ್ ಫಿಂಕ್, ಇದೊಂದು ದುರಂತ ಘಟನೆ. ಇಲ್ಲಿ ಯಾರನ್ನೂ ದೂಷಿಸಲಾಗದು. ಅಗ್ನಿಶಾಮಕ ದಳದ ಸಿಬ್ಬಂದಿ ಫೋಮ್ ಬಳಸಿದ್ದರಿಂದ ಜೇನ್ನೊಣಗಳು ಸತ್ತಿವೆ. ಆದರೆ, ಫೋಮ್ ಬಳಸದಿದ್ದರೆ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿರಲಿಲ್ಲ. ಯಾವುದೇ ಮನುಷ್ಯರ ಪ್ರಾಣ ಹಾನಿಯಾಗಿಲ್ಲ. 65.62 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಮಾಹಿತಿ ನೀಡಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...