“ನನ್ನ ಜೀವನದ ಬೆಸ್ಟ್ ದಿನಗಳು ಅವು” ಎಂದು ’ಸಮ್ಮರ್ಸ್ ಆಫ್ 69’ನಲ್ಲಿ ನಟ ಬ್ರಯಾನ್ ಅಡಮ್ಸ್ ಹೇಳಿದ ಮಾತುಗಳು ನಮ್ಮ ಜೀವನದಲ್ಲಿ ಅದೆಷ್ಟೋ ಬಾರಿ ಆಪ್ಯಾಯಮಾನವಾಗಿಬಿಡುತ್ತವೆ.
ಅಲ್ಪನಾ ಜಾಲಿ ಹೆಸರಿನ ಟ್ವಿಟರ್ ಬಳಕೆದಾರರೊಬ್ಬರು ಶೇರ್ ಮಾಡಿರುವ ವಿಡಿಯೋವೊಂದು ಇದೇ ಮಾತನ್ನು ಮಾರ್ದನಿಸುತ್ತಿದೆ. ಈ ವಿಡಿಯೋದಲ್ಲಿ, ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಒಂದು ಮೂಡಿಬರುತ್ತಿರುವಂತೆಯೇ ಕುಟುಂಬವೊಂದು ಎಂಜಾಯ್ ಮಾಡುತ್ತಿರುವುದನ್ನು ನೋಡಬಹುದಾಗಿದೆ.
ಮ್ಯಾಗಿಯಿಂದ ಹಿಡಿದು ಪಾನ್ಪರಾಗ್ವರೆಗೂ ನಮ್ಮದೇ ಬಾಲ್ಯದಿಂದಲೂ ಕೇಳಿಕೊಂಡು ಬಂದಿರುವ ಜಿಂಗಲ್ ಜಾಹೀರಾತುಗಳಲ್ಲಿ ಬರುತ್ತಿದ್ದ ಮ್ಯೂಸಿಕ್ ಎಲ್ಲವನ್ನೂ ಸೇರಿಸಿ ಮೆಡ್ಲೆ ಒಂದನ್ನು ಮಾಡಿ ಈ ಬ್ಯಾಂಡ್ ವಾದಕರು ಹಾಡೊಂದನ್ನು ಮೂಡಿಸಿದ್ದರು. ಹಳೆಯ ನೆನಪುಗಳನ್ನು ಮತ್ತೊಮ್ಮೆ ಸ್ಮರಿಸಿ ಭಾರೀ ಖುಷಿಯಾದ ಅಲ್ಲಿದ್ದ ಜನರ ಬ್ಯಾಂಡ್ ವಾದಕರ ತಾಳಕ್ಕೆ ತಾವೂ ಸಹ ದನಿಗೂಡಿಸಿದ್ದಾರೆ.