ನಕಲಿ ಪದಾರ್ಥಗಳನ್ನ ಬಳಸಿ ಕಲಬೆರಕೆ ಮಸಾಲೆ ಪದಾರ್ಥಗಳನ್ನ ಉತ್ಪಾದನೆ ಮಾಡಿದ ಆರೋಪದಡಿಯಲ್ಲಿ ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಪೊಲೀಸರು ಮಸಾಲೆ ಉತ್ಪಾದನಾ ಘಟಕದ ಮೇಲೆ ದಾಳಿ ನಡೆಸಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ ಕಾರ್ಖಾನೆ ಮಾಲೀಕರಾದ ಅನುಪ್ ರನ್ನ ಪೊಲೀಸರು ಬಂಧಿಸಿದ್ದು ಕಾರ್ಖಾನೆಯನ್ನ ಸೀಜ್ ಮಾಡಲಾಗಿದೆ.
ಹತ್ರಾಸ್ ಜಿಲ್ಲೆಯ ನವೀಪುರ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಪೊಲೀಸರು ಖಾರದ ಪುಡಿ, ಗರಂ ಮಸಾಲಾ, ಕೊತ್ತಂಬರಿ ಪುಡಿ, ಅರಿಶಿಣ ಸೇರಿದಂತೆ ಅನೇಕ ಮಸಾಲೆ ಪದಾರ್ಥಗಳನ್ನ ವಶಕ್ಕೆ ಪಡೆದಿದ್ದಾರೆ.
ಈ ಎಲ್ಲ ಮಸಾಲೆ ಪದಾರ್ಥಗಳಿಗೆ ಕತ್ತೆ ಸಗಣಿ, ಕೃತಕ ಬಣ್ಣ, ಹುಲ್ಲು ಹಾಗೂ ಸ್ಥಳೀಯ ಬ್ರ್ಯಾಂಡ್ಗಳಿಂದ ಕಲಬೆರಕೆ ಮಾಡಲಾಗುತ್ತಿತ್ತು.
ಈ ಕಾರ್ಖಾನೆಯಿಂದ 27 ಮಾದರಿಗಳನ್ನ ಸಂಗ್ರಹಿಸಿರುವ ಪೊಲೀಸರು ಅವೆಲ್ಲವನ್ನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಪರೀಕ್ಷಾ ವರದಿಯ ಫಲಿತಾಂಶವನ್ನ ಆಧರಿಸಿ ಕಾರ್ಖಾನೆ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಲಿದೆ.