ತಮಿಳಿನಾಡಿನ ಕೊಯಮತ್ತೂರಿನ ಕಾಮಾಕ್ಷಿಪುರಿ ಅಧಿನಮ್ ದೇಗುಲದ ಆಡಳಿತ ವರ್ಗವು ’ಕೊರೊನಾ ದೇವಿ’ ಪ್ರತಿಮೆಯನ್ನು ಪ್ರತಿಷ್ಠಾಪಿಸಿ, ಜನರನ್ನು ಕೋವಿಡ್-19 ಸೋಂಕಿನಿಂದ ರಕ್ಷಿಸಲು ಪ್ರಾರ್ಥನೆ ಮಾಡುತ್ತಿದೆ.
ಸಾಂಕ್ರಮಿಕಗಳಿಂದ ಜನರನ್ನು ರಕ್ಷಿಸಲು ಪ್ರಾರ್ಥಿಸಲು ಹೀಗೆ ಹೊಸ ದೇವತೆಗಳ ಸೃಷ್ಟಿಸುವುದು ಅಭ್ಯಾಸವಾಗಿಬಿಟ್ಟಿದೆ ಎಂದು ಅಧಿನಮ್‌ನ ಉಸ್ತುವಾರಿ ನೋಡಿಕೊಳ್ಳುತ್ತಿರುವ ಶಿವಲಿಂಗೇಶ್ವರ ಹೆಸರಿನ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
ನಾಚಿಕೆಗೇಡು…! ವಿದ್ಯಾರ್ಥಿ ಖಾಸಗಿ ಅಂಗಕ್ಕೆ ಇಸ್ತ್ರಿ ಪೆಟ್ಟಿಗೆ ಇಟ್ಟ ಶಿಕ್ಷಕ
ತಮಿಳುನಾಡಿನಲ್ಲಿ ಇಂಥದ್ದೇ ಅನೇಕ ದೇವಾಲಯಗಳಿವೆ. ಕೊಯಮತ್ತೂರಿನ ಪ್ಲೇಗ್ ಮಾರಿಯಮ್ಮನ್ ಇದಕ್ಕೊಂದು ಉದಾಹರಣೆ. ಈ ಹಿಂದೆ ಸಹ ಪ್ಲೇಗ್ ಹಾಗೂ ಕಾಲರಾದಂಥ ಸಾಂಕ್ರಮಿಕಗಳು ಅಟಕಾಯಿಸಿಕೊಂಡ ವೇಳೆ ಜನರನ್ನು ಈ ದೇವತೆಯರು ಕಾಪಾಡಿದ್ದರು ಎಂದು ಜನರು ನಂಬುತ್ತಾರೆ.
ಕೋವಿಡ್ ಸಾಂಕ್ರಮಿಕದ ಹಿನ್ನೆಲೆಯಲ್ಲಿ, ಗ್ರಾನೈಟ್ ಬಳಸಿಕೊಂಡು ಕೊರೋನಾ ದೇವಿಯ ಮೂರ್ತಿ ಪ್ರತಿಷ್ಠಾಪಿಸಿ 48 ದಿನಗಳ ಕಾಲ ಪ್ರಾರ್ಥನೆ ಮಾಡಲು ಕಾಮಾಕ್ಷಿಪುರಿ ಅಧಿನಮ್ ಆಡಳಿತವು ನಿರ್ಧರಿಸಿದೆ. ಈ ಹೊಸ ದೇವತೆಗೆ ಮಹಾಯಾಗವನ್ನೂ ಸಹ ಮಾಡಲು ನಿರ್ಧರಿಸಿದ್ದು, ಸದ್ಯದ ಪರಿಸ್ಥತಿಯಲ್ಲಿ ಜನರು ಇಲ್ಲಿಗೆ ಬಂದು ಪ್ರಾರ್ಥನೆ ಮಾಡಲು ಅವಕಾಶ ಮಾಡಿಕೊಟ್ಟಿಲ್ಲ.