alex Certify ನಾಚಿಕೆಗೇಡು…! ವಿದ್ಯಾರ್ಥಿ ಖಾಸಗಿ ಅಂಗಕ್ಕೆ ಇಸ್ತ್ರಿ ಪೆಟ್ಟಿಗೆ ಇಟ್ಟ ಶಿಕ್ಷಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಚಿಕೆಗೇಡು…! ವಿದ್ಯಾರ್ಥಿ ಖಾಸಗಿ ಅಂಗಕ್ಕೆ ಇಸ್ತ್ರಿ ಪೆಟ್ಟಿಗೆ ಇಟ್ಟ ಶಿಕ್ಷಕ

 

 

 

 

 

 

 

 

 

 

 

 

ಬಿಹಾರದ ಬೆಗುಸರೈನಲ್ಲಿ ತಲೆತಗ್ಗಿಸುವ ಘಟನೆ ನಡೆದಿದೆ. ಇಬ್ಬರು ಶಿಕ್ಷಕರ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ. 12 ವರ್ಷದ ವಿದ್ಯಾರ್ಥಿ ಖಾಸಗಿ ಅಂಗಕ್ಕೆ ಶಿಕ್ಷಕರಿಬ್ಬರು ಬಿಸಿ ಇಸ್ತ್ರಿ ಪೆಟ್ಟಿಗೆಯನ್ನು ಇಟ್ಟಿದ್ದಾರೆ. ವಿದ್ಯಾರ್ಥಿ ಪಾಲಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಶಿಕ್ಷಕರಿಬ್ಬರಿಬ್ಬರನ್ನು ಬಂಧಿಸಲಾಗಿದೆ.

ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿಯೂ ಪಿಸಿ ಹೈಸ್ಕೂಲ್ ನಡೆಯುತ್ತಿದೆ. ಪೀಡಿತ ಹಾಸ್ಟೆಲ್ ನಲ್ಲಿದ್ದಾನೆ. ಕುಟುಂಬಸ್ಥರು ಶಿಕ್ಷಕ ರಾಹುಲ್ ಹಾಗೂ ಚಂದನ್ ಗೆ ಮಗನ ಜವಾಬ್ದಾರಿ ನೀಡಿದ್ದರು. ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿ ಮೇಲೆ ಯಾವುದೋ ಕಾರಣಕ್ಕೆ ಕೋಪಗೊಂಡ ಶಿಕ್ಷಕರು ಬಟ್ಟೆ ಬಿಚ್ಚಿ, ದೇಹದ ಹಿಂಭಾಗದ ಖಾಸಗಿ ಅಂಗಕ್ಕೆ ಇಸ್ತ್ರಿಪೆಟ್ಟಿಗೆಯಿಂದ ಶಾಖ ನೀಡಿದ್ದಾರೆ.

ಈ ವಿಷ್ಯವನ್ನು ಪಾಲಕರಿಗೆ ಹೇಳಿದ್ರೆ ಶಾಲೆಯಿಂದ ತೆಗೆದು ಹಾಕುವುದಾಗಿ ಬೆದರಿಸಿದ್ದಾರೆ. ಹಿಂದಿನ ಭಾನುವಾರ ಮನೆಗೆ ಬಂದ ವಿದ್ಯಾರ್ಥಿ ತಾಯಿ ಮುಂದೆ ಈ ವಿಷ್ಯ ಹೇಳಿದ್ದಾನೆ. ವಿಷ್ಯ ಎಲ್ಲರಿಗೂ ಗೊತ್ತಾಗ್ತಿದ್ದಂತೆ ಶಾಲೆ ಮುಂದೆ ಬಂದು ಗಲಾಟೆ ಮಾಡಿದ್ದಾರೆ. ತಕ್ಷಣ ಎಚ್ಚೆತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶಿಕ್ಷಕರಿಬ್ಬರನ್ನು ಬಂಧಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...