ಸೊಳ್ಳೆ ಕಾಟದಿಂದ ಮನೆಯನ್ನ ಪಾರು ಮಾಡಬೇಕು ಅಂದ್ರೆ ಅದು ಸುಲಭದ ಕೆಲಸವಂತೂ ಅಲ್ಲವೇ ಇಲ್ಲ. ಈಗಿನ ವಾತಾವರಣದಲ್ಲಂತೂ ಡೆಂಗ್ಯೂ, ಚಿಕುನ್ ಗುನ್ಯಾ ಜಾಗೂ ಜಿಕಾ ವೈರಸ್ಗಳ ಅಪಾಯ ಹೆಚ್ಚಿರುವಾಗ ಸೊಳ್ಳೆಯಿಂದ ಎಷ್ಟು ದೂರವಿದ್ದರೂ ಸಹ ಕಡಿಮೆಯೇ.
ಸೊಳ್ಳೆಗಳಿಂದ ಪಾರಾಗೋಕೆ ಮಸ್ಕಿಟೋ ಕಾಯಿಲ್ಸ್, ರೆಪಲ್ಲೆಂಟ್ ಹೀಗೆ ನಾನಾ ಬಗೆಯ ಸಾಧನಗಳನ್ನ ಬಳಕೆ ಮಾಡ್ತೇವೆ. ಆದರೆ ಇವುಗಳಲ್ಲಿ ಯಾವ ಸಾಧನ ಕೂಡ ಸೊಳ್ಳೆಯ ಮೊಟ್ಟೆಗಳಾದ ಲಾರ್ವಾಗಳನ್ನ ನಾಶ ಮಾಡುವ ಸಾಮರ್ಥ್ಯ ಹೊಂದಿಲ್ಲ.
ಆದರೆ ತಮಿಳುನಾಡಿನ ಕಲ್ಪಕಂನ 9 ವರ್ಷದ ಬಾಲಕಿ ಹಳೆಯ ಟೈರ್ ಹಾಗೂ ಪಿವಿಸಿ ಪೈಪ್ ಬಳಸಿ ಸೊಳ್ಳೆಯ ಮರಿಗಳನ್ನೇ ನಾಶ ಮಾಡುವ ಪ್ಲಾನ್ ಹೇಳಿಕೊಟ್ಟಿದ್ದಾಳೆ. ಮನೆಯಲ್ಲೇ ಇರುವ ವಸ್ತುವನ್ನ ಬಳಸಿ ಮಾಡಿರುವ ಈ ಸಾಧನ ನೆಟ್ಟಿಗರಿಗೆ ಬಲು ಇಷ್ಟವಾಗಿದೆ.