alex Certify ಅಚ್ಚರಿ…! ನೆಟ್ಟಿಗರಿಗೆ ಯೋಗ ಮಾಡಲು ಪ್ರೇರೇಪಿಸಿದ ಅಳಿಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿ…! ನೆಟ್ಟಿಗರಿಗೆ ಯೋಗ ಮಾಡಲು ಪ್ರೇರೇಪಿಸಿದ ಅಳಿಲು

ದೇಹದ ಸ್ವಾಸ್ಥ್ಯ ಕಾಪಾಡಲು ಯೋಗ ಪರಿಣಾಮಕಾರಿ ಎಂಬುದು ಇತ್ತೀಚಿನ ದಿನಗಳಲ್ಲಿ ಜನಜನಿತ. ಆರೋಗ್ಯಕರ ಜೀವನ ಶೈಲಿ ಕಾಪಾಡಲು ಯೋಗ ಸಹಾಯ ಮಾಡುತ್ತದೆ ಎಂದರಿತ ಜನ ದಿನಚರಿಯಲ್ಲಿ ಅದನ್ನು ಸೇರಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ.

ವಸ್ತುಸ್ಥಿತಿ ಹೀಗಿರುವಾಗ, ಅಳಿಲೊಂದು ಕಪಾಲಭಾತಿ ಮಾಡುವ ವಿಡಿಯೋ ನೆಟ್ಟಿಗರನ್ನು ಯೋಗ ಮಾಡಲು ಪ್ರೇರೇಪಣೆ ನೀಡುವಂತಿದೆ.

58 ಸೆಕೆಂಡುಗಳ ವಿಡಿಯೋವನ್ನು ಐಎಫ್ಎಸ್ ಅಧಿಕಾರಿಯೊಬ್ಬರು ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಅಳಿಲೊಂದು ಕೈ ಮಡಚಿ ಸಣ್ಣದಾಗಿ ಉಸಿರೆಳೆದು ದೀರ್ಘವಾಗಿ ಉಸಿರು ಹೊರಹಾಕುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಮೇಲ್ನೋಟಕ್ಕೆ ಇದನ್ನು ಗಮನಿಸಿದರೆ ಮನುಷ್ಯರು ಮಾಡುವ ಕಪಾಲಭಾತಿಯಂತೆ ತೋರುತ್ತದೆ.

ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಪೋಸ್ಟ್ ಆದ ಕೆಲವೇ ಗಂಟೆಗಳಲ್ಲಿ 12,000 ಜನ ವೀಕ್ಷಿಸಿದ್ದಾರೆ. ನೂರಾರು ಮಂದಿ ಪ್ರತಿಕ್ರಿಯಿಸಿ ಖುಷಿಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...