
ಟ್ವಿಟರ್ನಲ್ಲಿ ಶೇರ್ ಮಾಡಲಾದ ಪೋಸ್ಟ್ನಲ್ಲಿ ಕೊಲ್ಕತ್ತಾದ ಈ ಕಲಾವಿದ ಜೀವನೋಪಾಯಕ್ಕಾಗಿ ಇಳಿವಯಸ್ಸಿನಲ್ಲೂ ಎಷ್ಟು ಕಷ್ಟ ಪಡ್ತಿದ್ದಾರೆ ಅನ್ನೋದನ್ನ ಬಣ್ಣಿಸಲಾಗಿದೆ. ಸ್ವಂತ ಮಕ್ಕಳೇ ಮನೆಯಿಂದ ಹೊರಹಾಕಿರೋದ್ರಿಂದ ವೃದ್ದಾಪ್ಯದಲ್ಲೂ ಜೀವನೋಪಾಯಕ್ಕೆ ಏನಾದರೂ ಮಾಡಲೇಬೇಕಾದ ಅನಿವಾರ್ಯತೆ ಸುನೀಲ್ ಅವರಿಗಿತ್ತು.
ಹೀಗಾಗಿ ಕೊಲ್ಕತ್ತಾದ ವಿವಿಧ ಏರಿಯಾಗಳಲ್ಲಿ ಕೂತು ತಮ್ಮ ಪೇಂಟಿಂಗ್ಗಳನ್ನ ಕೇವಲ 50 ಹಾಗೂ 100 ರೂಪಾಯಿಗಳಿಗೆ ಮಾರಾಟ ಮಾಡ್ತಾರೆ. ಕೋವಿಡ್ನಿಂದಾಗಿ ವೃದ್ಧರಿಗೆ ಮನೆಯಲ್ಲೇ ಇರಬೇಕು ಎಂದು ತಜ್ಞರು ಸಲಹೆ ನೀಡಿದ್ದರೂ ಸಹ ಹಣಕ್ಕಾಗಿ ಬೀದಿ ಬೀದಿ ಅಲೆಯಲೇಬೇಕಾದ ಅನಿವಾರ್ಯತೆ ಸುನೀಲ್ರಿಗಿದೆ. ಟ್ವಿಟರ್ನಲ್ಲಿ ಸುನೀಲ್ರ ಬಗೆಗಿನ ಪೋಸ್ಟ್ಗಳು ವೈರಲ್ ಆಗುತ್ತಿದ್ದಂತೆಯೇ ಅನೇಕರು ಕಲಾವಿದ ಸುನೀಲ್ರ ಸಹಾಯಕ್ಕೆ ಧಾವಿಸಿದ್ದಾರೆ.