alex Certify ಮಂಗನಿಗೂ ಗೊತ್ತಾಗಿದೆ ‘ಮಾಸ್ಕ್’ ಮಹತ್ವ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಗನಿಗೂ ಗೊತ್ತಾಗಿದೆ ‘ಮಾಸ್ಕ್’ ಮಹತ್ವ….!

ಈಗ ಎಲ್ಲೆಲ್ಲೂ ಕೊರೊನಾ ಭಯ ಕಾಡುತ್ತಿದೆ. ಅಲ್ಲದೆ, ಸಾಮಾಜಿಕ ಅಂತರದ ಜೊತೆಗೆ ಫೇಸ್ ಮಾಸ್ಕ್ ಅನ್ನು ಸಹ ಬಳಸಬೇಕೆಂದು ಹೇಳಲಾಗುತ್ತಿದೆ. ಆದರೆ, ಈ ಮಂಗಕ್ಕೆ ಇದು ಮೊದಲೇ ಗೊತ್ತಿತ್ತೇ..? ಹಾಗಾಗಿ ತಲೆಗೆ ಸುತ್ತಿಕೊಳ್ಳುವ ಸ್ಕಾರ್ಪ್ ಅನ್ನು ಮುಖಕ್ಕೆ ಸುತ್ತಿಕೊಂಡು ಜಾಗೃತಿ ಮೆರೆದಿದೆ ಎಂದು ವಿಡಿಯೋವನ್ನು ನೋಡಿ ನೆಟ್ಟಿಗರು ಮಜಾ ತೆಗೆದುಕೊಳ್ಳುತ್ತಿದ್ದಾರೆ.

ಐಎಫ್ಎಸ್ ಅಧಿಕಾರಿ ಸುಶಾಂತ್ ನಂದ ಅವರು ಮಂಗವೊಂದು ಸ್ಕಾರ್ಪ್ ಅನ್ನು ಮಾಸ್ಕ್ ನಂತೆ ಬಳಸುವ ವಿಡಿಯೋವನ್ನು ಅಪ್ಲೋಡ್ ಮಾಡಿದ್ದು, “ಸ್ಕ್ರಾರ್ಪ್ ಅನ್ನು ಫೇಸ್ ಮಾಸ್ಕ್ ನಂತೆ ಬಳಸಿದರೆ ಹೇಗಿರುತ್ತೆ ಎಂಬುದನ್ನು ನೋಡಿ’’ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ.

ಇದು ಹಳೇ ವಿಡಿಯೋ ಆಗಿದ್ದು, ಟ್ವಿಟ್ಟರ್ ಸಹಿತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈಗಾಗಲೇ ಈ ವಿಡಿಯೋವನ್ನು 18,900 ಮಂದಿ ವೀಕ್ಷಿಸಿದ್ದರೆ, 2200 ಲೈಕ್ ಗಳು ಬಂದಿವೆ. ನೂರಾರು ಕಮೆಂಟ್ ಗಳು ಸಹ ಬಂದಿವೆ. ಹಾಗಾಗಿ ಮಂಗನ ಕೈಲಿ ಮಾಣಿಕ್ಯದಂತಹ ಸಲಹೆಗಳೂ ವ್ಯಕ್ತವಾಗುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...