ಊಟ ಮಾಡುವಾಗಲೂ ಸ್ಮಾರ್ಟ್ ಫೋನ್ ಬಿಡಲಾರದವರಿಗೆ ಬಂತೊಂದು ತಟ್ಟೆ….! 12-09-2020 9:35AM IST / No Comments / Posted In: Latest News, India, Special ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ಬದಲಾಗುವ ಸವಾಲುಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿಯೂ ನಾವು ಸಿದ್ಧಹಸ್ತರು. ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನಗಳ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ನಮ್ಮ ದೇಹಗಳ ಪರ್ಯಾಯ ಅಂಗದಂತೆಯೇ ಆಗಿಬಿಟ್ಟಿರುವ ಈ ಸ್ಮಾರ್ಟ್ ಫೋನ್ ಗಳನ್ನು ಕೈಯಲ್ಲಿ ಹಿಡಿದಿಟ್ಟುಕೊಂಡು ಸಾಮಾಜಿಕ ಜಾಲತಾಣಗಳ ನ್ಯೂಸ್ ಫೀಡ್ ಅನ್ನು ಬ್ರೌಸ್ ಮಾಡದೇ 5-10 ನಿಮಿಷಗಳ ಕಾಲ ಇರಲು ಸಾಧ್ಯವೇ ಇಲ್ಲ ಎನ್ನುವಂತಾಗಿಬಿಟ್ಟಿದೆ ಲೈಫ್. ಬಹಳಷ್ಟು ಮಂದಿಗೆ ಉಟ ಮಾಡುವಾಗಲಂತೂ ಈ ಫೋನ್‌ಗಳು ಬೇಕೇಬೇಕು. ಇದಕ್ಕೆಂದೇ ರೆಸ್ಟೋರೆಂಟ್ ಒಂದು ತನ್ನ ಥಾಲಿಯ ತಟ್ಟೆಯಲ್ಲಿ ಸ್ಮಾರ್ಟ್ ಫೋನ್ ಗೆಂದೇ ಪ್ರತ್ಯೇಕ ವಿಭಾಗವೊಂದನ್ನು ಇಟ್ಟಿದೆ. ಅನ್ನ, ಸಾರು, ಪಲ್ಯಗಳು, ಮೊಸರು ಹಾಗೂ ಸಿಹಿ ತಿನಿಸುಗಳಿಗೆ ಪ್ರತ್ಯೇಕ ವಿಭಾಗಗಳು ಇರುವಂತೆಯೇ ಈ ಸ್ಮಾರ್ಟ್ ಫೋನ್ ಗೂ ಸಹ ತಟ್ಟೆಯಲ್ಲಿ ಪ್ರತ್ಯೇಕ ಜಾಗವಿದೆ. ಇಂಥ ಆವಿಷ್ಕಾರೀ ತಟ್ಟೆಯ ಚಿತ್ರವೊಂದನ್ನು ಭಾರತ ಕ್ರಿಕೆಟ್ ತಂಡ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. Modern thali with space for phone 📱 orders urs 😂😂😂😂 pic.twitter.com/jRfW7REH9M — Harbhajan Turbanator (@harbhajan_singh) September 10, 2020