alex Certify ಕೊರೊನಾ ಸೋಂಕಿತರಿಗೆ ರಿಕ್ಷಾ ಚಾಲಕನಿಂದ ಉಚಿತ ಸೇವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೋಂಕಿತರಿಗೆ ರಿಕ್ಷಾ ಚಾಲಕನಿಂದ ಉಚಿತ ಸೇವೆ

This Kolhapur Driver is Ferrying Thousands of Covid-19 Patients for Free in His 'Auto Ambulance'

ಕೋವಿಡ್‌-19ನ ಎರಡನೇ ಅಲೆಗೆ ದೇಶ ಅಕ್ಷರಶಃ ತತ್ತರಿಸಿ ಹೋಗಿರುವ ನಡುವೆಯೇ ಲಭ್ಯವಿರುವ ವೈದ್ಯಕೀಯ ಮೂಲ ಸೌಕರ್ಯಗಳು ಒಮ್ಮೆಲೇ ಬರುತ್ತಿರುವ ರೋಗಿಗಳ ಸುನಾಮಿಯನ್ನು ಎದುರಿಸಿ ನಿಲ್ಲಲು ಅಶಕ್ತವಾಗಿಬಿಟ್ಟಿವೆ. ಈ ಸಂಕಷ್ಟದ ಅವಧಿಯಲ್ಲಿ ಸಾರ್ವಜನಿಕರು ಖುದ್ದು ಒಬ್ಬರಿಗೊಬ್ಬರು ಸಹಾಯ ಮಾಡಲು ಮುಂದಾಗಿದ್ದಾರೆ.

ಮಹಾರಾಷ್ಟ್ರದ ಕೊಲ್ಹಾಪುರದ ಆಟೋರಿಕ್ಷಾ ಚಾಲಕರೊಬ್ಬರು ತಮ್ಮ ವಾಹನವನ್ನೇ ತುರ್ತು ಕೋವಿಡ್ ಆಂಬುಲೆನ್ಸ್ ಆಗಿ ಮಾರ್ಪಾಡು ಮಾಡಿಕೊಂಡಿದ್ದಾರೆ. ಕೋವಿಡ್-19 ಸೋಂಕಿತರನ್ನು ಹಗಲು-ಇರುಳೆನ್ನದೇ ಆಸ್ಪತ್ರೆಗೆ ಉಚಿತವಾಗಿ ರವಾನೆ ಮಾಡಲು ನೆರವಾಗುತ್ತಿದ್ದಾರೆ ಚಾಲಕ ಜಿತೇಂದ್ರ ಶಿಂಧೆ.

ಯಂತ್ರದ ಮೂಲಕ ಮಹಿಳೆಯರ ʼತಿಂಗಳʼ ಯಾತನೆ ಅರಿತ ಪುರುಷರು

ಕಳೆದ ವರ್ಷ ಮಾರ್ಚ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಿದ ಬಳಿಕ ಜಿತೇಂದ್ರ ಅವರು ಈ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದುವರೆಗೂ ತಮ್ಮ ರಿಕ್ಷಾ ಆಂಬುಲೆನ್ಸ್‌ನಲ್ಲಿ 1000ಕ್ಕೂ ಹೆಚ್ಚು ಸೋಂಕಿತರನ್ನು ಆಸ್ಪತ್ರೆಗೆ ತಲುಪಿಸಿ ಜೀವ ಉಳಿಸಿದ್ದಾರೆ ಈ ಪರೋಪಕಾರಿ.

ಸಣ್ಣಪುಟ್ಟ ಅಂತರದಲ್ಲಿ ಆಸ್ಪತ್ರೆಗಳು ಇದ್ದರೂ ಸಹ ರೋಗಿಗಳನ್ನು ಸಾಗಿಸಲು ಸಾವಿರಾರು ರೂಪಾಯಿ ಕೇಳುವ ಆಂಬುಲೆನ್ಸ್‌ಗಳ ನಡುವೆ ಶಿಂಧೆ ತಮ್ಮ ವಾಹನದಲ್ಲಿ ರೋಗಿಗಳನ್ನು ಉಚಿತವಾಗಿ ಕರೆದುಕೊಂಡು ಹೋಗುತ್ತಿದ್ದಾರೆ. ತಮ್ಮ ಈ ಪರೋಪಕಾರಕ್ಕೆಂದೇ ಶಿಂಧೆ ಅವರು 1,50,000 ರೂ.ಗಳನ್ನು ಖರ್ಚು ಮಾಡಿದ್ದಾರೆ. ಜೊತೆಗೆ ಪಿಪಿಇಗಳ ಖರೀದಿಗೆಂದು ಹೆಚ್ಚುವರಿಯಾಗಿ 5,000 ರೂ.ಗಳನ್ನು ವ್ಯಯಿಸಿದ್ದಾರೆ ಶಿಂಧೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...