alex Certify BIG NEWS: ರಾಜಕೀಯ ನಿವೃತ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ನಿತೀಶ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜಕೀಯ ನಿವೃತ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ನಿತೀಶ್

ಮೂರು ಬಾರಿ ಬಿಹಾರದ ಸಿಎಂ ಆಗಿರುವ ನಿತೀಶ್​ ಕುಮಾರ್​ 2020 ವಿಧಾನಸಭಾ ಚುನಾವಣೆಯನ್ನ ತಮ್ಮ ಕೊನೆಯ ಚುನಾವಣೆ ಎಂದು ಘೋಷಣೆ ಮಾಡಿದ್ದಾರೆ.

69 ವರ್ಷದ ನಿತೀಶ್​ ಕುಮಾರ್​​ ಚುನಾವಣಾ ರಾಲಿಯಲ್ಲಿ ಮಾಡಿದ ಭಾಷಣದಲ್ಲಿ ನಿವೃತ್ತಿ ಬಗ್ಗೆ ಸುಳಿವು ನೀಡಿದ್ದಾರೆ.

ಇಂದು ಪ್ರಚಾರದ ಕೊನೆಯ ದಿನ ಹಾಗೂ ಇದೇ ನನ್ನ ಕೊನೆಯ ಚುನಾವಣೆ ಕೂಡ ಆಗಿದೆ. ಅಂತ್ಯ ಚೆನ್ನಾಗಿದ್ದರೆ ಎಲ್ಲವೂ ಚೆನ್ನಾಗಿರುತ್ತೆ ಎಂದು ಪೂರ್ಣಿಯಾ ಜಿಲ್ಲೆಯ ಧಮದಾದಲ್ಲಿ ನಿತೀಶ್​ ಕುಮಾರ್​ ಹೇಳಿದ್ರು.

ಇನ್ನು ನಿತೇಶ್​ ಕುಮಾರ್​ರ ಈ ಹೇಳಿಕೆ ವಿರುದ್ಧವಾಗಿ ಟ್ವೀಟ್​ ಮಾಡಿದ ಎಲ್​ಜೆಪಿ ಮುಖ್ಯಸ್ಥ ಚಿರಾಗ್​ ಪಾಸ್ವಾನ್​, ಸಾಹೇಬರು ಇದು ತಮ್ಮ ಕೊನೆಯ ಚುನಾವಣೆ ಎಂದು ಹೇಳಿದ್ದಾರೆ. ಕಳೆದ 5 ವರ್ಷದ ಆಡಳಿತದಲ್ಲಿ ತಾವು ಮಾಡಿದ ಸಾಧನೆಯನ್ನ ನಿತೀಶ್​ ಹೇಳಿಲ್ಲ, ಮುಂದಿನ ಚುನಾವಣೆಯಲ್ಲಿ ಸಾಹೇಬರೂ ಇರಲ್ಲ. ಅವರ ಜೆಡಿಯೂನೂ ಇರಲ್ಲ ಅಂತಾ ವ್ಯಂಗ್ಯವಾಡಿದ್ದಾರೆ.

ನಿತೀಶ್​ ಕುಮಾರ್​ ದಣಿದಿದ್ದಾರೆ ಅಂತಾ ಹೋದಲ್ಲಿ ಬಂದಲ್ಲಿ ಹೇಳುತ್ತಿರುವ ಜೆಡಿ(ಯು) ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್​, ನಿತೀಶ್​ರಿಗೆ ಬಿಹಾರವನ್ನ ನಿರ್ವಹಿಸಲು ಸಾಧ್ಯವಾಗ್ತಿಲ್ಲ. ಅವರು ದಣಿದಿದ್ದಾರೆ ಅಂತಾ ಬಹಳ ಸಮಯದಿಂದ ನಾವು ಹೇಳುತ್ತಿದ್ದೇವೆ. ಕೊನೆಯ ದಿನದ ಪ್ರಚಾರದಂದು ನಿತೀಶ್​ ರಾಜಕೀಯ ನಿವೃತ್ತಿಯ ಮಾತನಾಡಿದ್ದಾರೆ. ಕೊನೆಗೂ ನಿತೀಶ್​ಗೆ ಈ ನೆಲದ ವಾಸ್ತವತೆ ಅರ್ಥವಾಗಿದೆ ಅಂತಾ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...