ಮೂರು ಬಾರಿ ಬಿಹಾರದ ಸಿಎಂ ಆಗಿರುವ ನಿತೀಶ್ ಕುಮಾರ್ 2020 ವಿಧಾನಸಭಾ ಚುನಾವಣೆಯನ್ನ ತಮ್ಮ ಕೊನೆಯ ಚುನಾವಣೆ ಎಂದು ಘೋಷಣೆ ಮಾಡಿದ್ದಾರೆ.
69 ವರ್ಷದ ನಿತೀಶ್ ಕುಮಾರ್ ಚುನಾವಣಾ ರಾಲಿಯಲ್ಲಿ ಮಾಡಿದ ಭಾಷಣದಲ್ಲಿ ನಿವೃತ್ತಿ ಬಗ್ಗೆ ಸುಳಿವು ನೀಡಿದ್ದಾರೆ.
ಇಂದು ಪ್ರಚಾರದ ಕೊನೆಯ ದಿನ ಹಾಗೂ ಇದೇ ನನ್ನ ಕೊನೆಯ ಚುನಾವಣೆ ಕೂಡ ಆಗಿದೆ. ಅಂತ್ಯ ಚೆನ್ನಾಗಿದ್ದರೆ ಎಲ್ಲವೂ ಚೆನ್ನಾಗಿರುತ್ತೆ ಎಂದು ಪೂರ್ಣಿಯಾ ಜಿಲ್ಲೆಯ ಧಮದಾದಲ್ಲಿ ನಿತೀಶ್ ಕುಮಾರ್ ಹೇಳಿದ್ರು.
ಇನ್ನು ನಿತೇಶ್ ಕುಮಾರ್ರ ಈ ಹೇಳಿಕೆ ವಿರುದ್ಧವಾಗಿ ಟ್ವೀಟ್ ಮಾಡಿದ ಎಲ್ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್, ಸಾಹೇಬರು ಇದು ತಮ್ಮ ಕೊನೆಯ ಚುನಾವಣೆ ಎಂದು ಹೇಳಿದ್ದಾರೆ. ಕಳೆದ 5 ವರ್ಷದ ಆಡಳಿತದಲ್ಲಿ ತಾವು ಮಾಡಿದ ಸಾಧನೆಯನ್ನ ನಿತೀಶ್ ಹೇಳಿಲ್ಲ, ಮುಂದಿನ ಚುನಾವಣೆಯಲ್ಲಿ ಸಾಹೇಬರೂ ಇರಲ್ಲ. ಅವರ ಜೆಡಿಯೂನೂ ಇರಲ್ಲ ಅಂತಾ ವ್ಯಂಗ್ಯವಾಡಿದ್ದಾರೆ.
ನಿತೀಶ್ ಕುಮಾರ್ ದಣಿದಿದ್ದಾರೆ ಅಂತಾ ಹೋದಲ್ಲಿ ಬಂದಲ್ಲಿ ಹೇಳುತ್ತಿರುವ ಜೆಡಿ(ಯು) ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್, ನಿತೀಶ್ರಿಗೆ ಬಿಹಾರವನ್ನ ನಿರ್ವಹಿಸಲು ಸಾಧ್ಯವಾಗ್ತಿಲ್ಲ. ಅವರು ದಣಿದಿದ್ದಾರೆ ಅಂತಾ ಬಹಳ ಸಮಯದಿಂದ ನಾವು ಹೇಳುತ್ತಿದ್ದೇವೆ. ಕೊನೆಯ ದಿನದ ಪ್ರಚಾರದಂದು ನಿತೀಶ್ ರಾಜಕೀಯ ನಿವೃತ್ತಿಯ ಮಾತನಾಡಿದ್ದಾರೆ. ಕೊನೆಗೂ ನಿತೀಶ್ಗೆ ಈ ನೆಲದ ವಾಸ್ತವತೆ ಅರ್ಥವಾಗಿದೆ ಅಂತಾ ಹೇಳಿದ್ರು.